ಸುರತ್ಕಲ್ ಟೋಲ್‌ಗೇಟ್ ರದ್ದತಿಗೆ ಮನವಿ
Update: 2021-02-17 21:56 IST
ಮಂಗಳೂರು, ಫೆ.17: ಸುರತ್ಕಲ್ ಟೋಲ್‌ಗೇಟ್ ರದ್ದತಿಗೆ ಆಗ್ರಹಿಸಿ ಸುರತ್ಕಲ್ ಪರಿಸರದ ನಾಗರಿಕರನ್ನು ಒಳಗೊಂಡ ನಿಯೋಗ ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಮಂಗಳವಾರ ಮನವಿ ಸಲ್ಲಿಸಿದೆ.
ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ರದ್ದುಗೊಳಿಸಬೇಕು, ಟೋಲ್‌ಗೇಟ್ ಹೆಸರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಟೋಲ್ ಹಣವನ್ನು ಮಂಗಳೂರು ಮನಪಾಕ್ಕೆ ಹಸ್ತಾಂತರಿಸಿ ನಗರ ಮತ್ತು ಹೆದ್ದಾರಿಯಲ್ಲಿ ದಾರಿದೀಪ ವ್ಯವಸ್ಥೆ ಕಲ್ಪಿಸಬೇಕು. ಅನಧಿಕೃತ ಟೋಲ್‌ಗೇಟ್ ನಿರ್ಮಾಣಕ್ಕೆ ಕುಮ್ಮಕ್ಕು ಕೊಟ್ಟು ಸರಕಾರಕ್ಕೆ ಮುಜುಗರ ತಂದ ಅಧಿಕಾರಿಗಳನ್ನು ಸೇವೆಯಿಂದ ಮುಕ್ತಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸ್ಥಳೀಯ ಸಂಘಟನೆಗಳ ಮುಖಂಡರಾದ ಮಹಾಬಲ ರೈ, ದಿನಕರ್ ಮಿತ್ರಪಟ್ಣ, ಅಲೋಶಿಯಸ್ ಮೊಂತೆರೋ, ಪ್ರಶಾಂತ್ ಕಾಂಚನ್, ಎಂಜಿ ರಾಮಚಂದ್ರ, ಅರುಶ್ ಐತಾಳ್, ಅರ್ಜುನ್ ಮಸ್ಕರೇಂನಸ್, ಯತೀಶ್ ಬೈಕಂಪಾಡಿ ನಿಯೋಗದಲ್ಲಿದ್ದರು.