ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನ
ಮಂಗಳೂರು, ಫೆ.17: ಮಣಿ ಕೃಷ್ಣಸ್ವಾಮಿ ಅಕಾಡಮಿಯು ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ನಡೆಸಿದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ‘ಯುವ ಕಲಾಮಣಿ’ ಪ್ರಶಸ್ತಿಯನ್ನು ಶ್ರೇಯಾ ಕೊಳತ್ತಾಯ, ‘ಎಂಕೆ ಮತ್ತು ಮಣಿ ವಾರ್ಷಿಕ ಪ್ರಶಸ್ತಿಯನ್ನು ‘ಸುನಾದ ಕೃಷ್ಣ, ‘ಎ. ಈಶ್ವರಯ್ಯ ರ್ವಾಕ ಪ್ರಶಸ್ತಿ’ಯನ್ನು ನಾಗೇಶ್ ಎ. ಬಪ್ಪನಾಡು ಮತ್ತು ಹಿರಿಯ ಸಾಧಕ ಸನ್ಮಾನವನ್ನು ಕೆಯು ರಾಘವೇಂದ್ರ ರಾವ್ ಅವರಿಗೆ ಪ್ರದಾನ ಮಾಡಲಾಯಿತು.
ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಿದರು. ಅಕಾಡಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶೈಲೇಂದ್ರ ಅನಂತಪುರ ಉಪಸ್ಥಿತರಿದ್ದರು. ಅಕಾಡಮಿಯ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಡಾ. ಕುಮಾರ ಸುಬ್ರಹ್ಮಣ್ಯ ಕಾರ್ಯ ಕ್ರಮ ನಿರೂಪಿಸಿದರು. ಉಮಾ ಶಂಕರಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ವೈಜಿ ಶ್ರೀಲತಾ ಪ್ರಶಸ್ತಿ ಫಲಕವನ್ನು ವಾಚಿಸಿದರು. ಅಕಾಡಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ವಂದಿಸಿದರು.
ಈ ಸಂದರ್ಭ ಆನ್‌ಲೈನ್ ಮೂಲಕ 1 ವರ್ಷದಿಂದ 600ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ಸಂಘಟಿಸುವ ಮುಲಕ 1000ಕ್ಕೂ ಅಧಿಕ ಕಲಾವಿದರಿಗೆ ವೇದಿಕೆ ಒದಗಿಸಿದ ವಿಭು ರಾವ್‌ರನ್ನು ಸನ್ಮಾನಿಸಲಾಯಿತು.