ರಾಜಸ್ಥಾನದ ಬಳಿಕ ಮಧ್ಯಪ್ರದೇಶದಲ್ಲಿ ʼಶತಕʼ ಬಾರಿಸಿದ ಪೆಟ್ರೋಲ್‌ ದರ

Update: 2021-02-18 06:59 GMT

ಹೊಸದಿಲ್ಲಿ: ರಾಜಸ್ಥಾನದಲ್ಲಿ ಪೆಟ್ರೋಲ್‌ ದರವು 100ರೂ. ದಾಟಿದ ಬಳಿಕ ಇದೀಗ ಮಧ್ಯಪ್ರದೇಶದಲ್ಲೂ ಪೆಟ್ರೋಲ್‌ ದರವು ಶತಕ ಬಾರಿಸಿದೆ ಎಂದು ತಿಳಿದು ಬಂದಿದೆ. ಸತತ 10 ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಭಾರೀ ಏರಿಕೆಯಾಗುತ್ತಿದೆ. ಮಧ್ಯಪ್ರದೇಶದ ಅಣ್ಣಾಪುರ್‌ ನಲ್ಲಿ ಪೆಟ್ರೋಲ್‌ ದರವು 100.25ರೂ. ಹಾಗೂ ಡೀಸೆಲ್‌ ದರವು 90.63 ರೂ. ಗೆ ಏರಿಕೆಗೊಂಡಿದೆ ಎಂದು ಇಂಡಿಯನ್‌ ಆಯಿಲ್‌ ನ ಅಧಿಕೃತ ವೆಬ್‌ ಸೈಟ್‌ ತಿಳಿಸಿದೆ. 

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ದರವು ಲೀಟರ್‌ ಗೆ 34ಪೈಸೆ ಏರಿಕೆಯಾಗಿದ್ದು, ಡೀಸೆಲ್‌ 32 ಪೈಸೆ ಏರಿಕೆ ಕಂಡಿದೆ. ಇನ್ನು ಭಾರತದ ಆರ್ಥಕ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ದರವು 96.32 ಆಗಿದ್ದರೆ ಡೀಸೆಲ್‌ ದರವು 87.32 ರೂ. ಆಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News