ಕೈಕಂಬ ವಿಕಾಸ್ ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ

Update: 2021-02-18 08:05 GMT

ಗುರುಪುರ, ಫೆ.18: ಗುರುಪುರ ಗ್ರಾಪಂ ವ್ಯಾಪ್ತಿಯ ವಿಕಾಸ್ ನಗರದಲ್ಲಿ ರೋಮಾನ್ಸ್ ಲೋಬೊ ಮನೆಯಿಂದ ರಾಷ್ಟ್ರೀಯ ಹೆದ್ದಾರಿ 169ರವರೆಗೆ ಜಿಪಂನ 3 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ರಸ್ತೆ ಕಾಂಕ್ರಿಟೀಕರಣಕ್ಕೆ ಗುರುವಾರ ಜಿಪಂ ಸದಸ್ಯ ಯುಪಿ ಇಬ್ರಾಹಿಂ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.

ಗ್ರಾಪಂ ನೂತನ ಸದಸ್ಯರಾದ ದಾವೂದ್, ಜಿಎಂ ಉದಯ ಭಟ್, ಸಚಿನ್ ಅಡಪ, ಮಾಜಿ ಸದಸ್ಯರಾದ ಗ್ಲಾಡಿಸ್ ಕ್ವಾಡ್ರಸ್, ಉಮೈಬಾನು, ಸ್ಥಳೀಯರಾದ ಎಸ್‌ಎಂ ಅಝೀಝ್, ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News