ಮಂಗಳೂರು : ಶಾಸಕ ಯು.ಟಿ. ಖಾದರ್ ಸಹೋದರನ ಮನೆಗೂ ಐಟಿ ದಾಳಿ
Update: 2021-02-18 14:49 IST
ಮಂಗಳೂರು : ಶಾಸಕ ಯು.ಟಿ.ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ನಗರದ ಲೈಟ್‌ಹೌಸ್‌ನ ಅಪಾರ್ಟ್‌ಮೆಂಟ್ ವೊಂದರಲ್ಲಿನ ಇಫ್ತಿಕಾರ್ ಅಲಿ ಇರುವ ಫ್ಲ್ಯಾಟ್‌ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರದಿಂದ ಐಟಿ ಅಧಿಕಾರಿಗಳು ಮಂಗಳೂರಿನ ಉದ್ಯಮಿಗಳಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಳಿ ಮುಂದುವರಿಸಿದ್ದು, ಅದರ ಭಾಗವಾಗಿಯೇ ಯು.ಟಿ. ಇಫ್ತಿಕಾರ್ ಮನೆಗೂ ದಾಳಿ ನಡೆದಿದೆ. ದಾಳಿಗೊಳಗಾದ ಸಂಸ್ಥೆಗಳಲ್ಲಿ ಇಫ್ತಿಕಾರ್‌ಗೆ ಪಾಲುದಾರಿಕೆ ಇತ್ತು ಎಂಬ ಶಂಕೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.