ತಲಪಾಡಿ ಟೋಲ್ ಮುಂಭಾಗದಲ್ಲಿ ಪ್ರತಿಭಟನೆ

Update: 2021-02-18 09:45 GMT

ಉಳ್ಳಾಲ:  ಐದು ಕಿಮೀ ವ್ಯಾಪ್ತಿಯ ಜನರಿಗೆ ಟೋಲ್ ರಹಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ದುಪ್ಪಟ್ಟು ದರ ವಸೂಲಿ ಕೈಬಿಡಬೇಕು ಎಂದು  ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಒತ್ತಾಯಿಸಿದರು‌.

ಅವರು ಟೋಲ್ ಅಧಿಕಾರಿ ಗಳು ದುಪ್ಪಟ್ಟು ದರ ವಸೂಲಿ ಮಾಡುವುದನ್ನು ವಿರೋಧಿಸಿ ತಲಪಾಡಿ ಹೋರಾಟ ಸಮಿತಿ ತಲಪಾಡಿ ಟೋಲ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಮಾತನಾಡಿದರು.

ಒಂದು ವೇಳೆ ಟೋಲ್ ಸಮಸ್ಯೆ ಗೆ ಪರಿಹಾರ ಒದಗಿಸದೇ ಇದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ. ಬೇಡಿಕೆ ಕೇವಲ ಎಚ್ಚರಿಕೆ ಮಾತ್ರ. ನವಯುಗ ಕಂಪೆನಿಯ ಪಾಠ ಗಡಿನಾಡು ಕನ್ನಡಿಗರಿಗೆ ಬೇಕಿಲ್ಲ ಎಂದರು.

ಪ್ರತಿಭಟನೆಯ ನಡುವೆ ಟೋಲ್ ಗೇಟ್ ದಾಟುತ್ತಿದ್ದ ಕಾರು ಸವಾರರೊಬ್ಬರಲ್ಲಿ ಫಾಸ್ಟ್ ಟ್ಯಾಗ್ ಇರಲಿಲ್ಲ. ಟೋಲ್ ಸಿಬ್ಬಂದಿ ಅವರಲ್ಲಿ 80 ರೂ. ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದಾಗ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿ 40 ರೂ. ನೀಡುವಂತೆ ಚಾಲಕನಲ್ಲಿ ಹೇಳಿದ್ದಾರೆ. ಅಲ್ಲದೆ ಅರ್ಧಕ್ಕೆ ಪ್ರಯಾಣಿಕರನ್ನು ಇಳಿಸುತ್ತಿದ್ದ ತಲಪಾಡಿ ಸಿಟಿ ಬಸ್ಸೊಂದನ್ನು ಟೋಲ್ ದಾಟಿಸಿದ್ದಾರೆ. ಈ ವೇಳೆ ಟೋಲ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ತಾಪಂ ಸದಸ್ಯ ಸಿದ್ದೀಕ್ ಕೊಳಂಗೆರೆ, ಸುರೇಖಾ ಚಂದ್ರ ಹಾಸ್ , ವಾಣಿ ಮಾತನಾಡಿದರು. ಇಸ್ಮಾಯಿಲ್ ಕೆಸಿರೋಡ್, ಗ್ರಾಪಂ ಸದಸ್ಯರಾದ ವೈಭವ್ ಶೆಟ್ಟಿ, ಪ್ಲೇವಿ ಡಿಸೋಜ, ಸ್ಥಳೀಯರಾದ ವಾಣಿ ಪೂಜಾರಿ, ನಝೀಮ, ಶಾನು ಶೆಟ್ಟಿ, ಗೋಪಾಲ ತಚ್ಚಾಣಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News