ಉಡುಪಿ: ಖಾಸಗಿ ಬಸ್‌ಗಳ ದರ ಏರಿಕೆಗೆ ರಾಜ್ಯ ಸರಕಾರಕ್ಕೆ ಆಗ್ರಹ
ಉಡುಪಿ, ಫೆ.18: ರಾಜ್ಯ ಸರಕಾರಿ ಬಸ್‌ಗಳ ದರ ಏರಿಕೆಯ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ದರ ಪರಿಷ್ಕರಣೆಯನ್ನು ಏಕಕಾಲದಲ್ಲಿ ಮಾಡು ವಂತೆ ಕರ್ನಾಟಕ ರಾಜ್ಯ ಬಸ್ಸು ಮಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಂದಾಪುರದ ಸದಾನಂದ ಛಾತ್ರ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿರುವ ಅವರು, ಈಗ ಡೀಸೆಲ್ ದರ ನಿರಂತರವಾಗಿ ಹೆಚ್ಚುತಿದ್ದು, ಈಗಾಗಲೇ ಲೀಟರ್‌ಗೆ 23ರೂ.ಗಳಷ್ಟು ಹೆಚ್ಚಾಗಿದೆ.ರಾಜ್ಯದ ಸರಕಾರಿ ಸ್ವಾಮ್ಯದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಸಂಸ್ಥೆಗಳಲ್ಲಿ ಶೇ.20ರಷ್ಟು ದರ ಹೆಚ್ಚಳ ಮಾಡಬೇಕೆಂದು ಮನವಿ ಯನ್ನು ಸಲ್ಲಿಸಿವೆ ಎಂದವರು ತಿಳಿಸಿದ್ದಾರೆ.
ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಾರಿಗೆ ಸಚಿವ ಹಾಗೂ ಅಧಿಕಾರಿಗಳ ಸಭೆಯಲ್ಲಿ ರಾಜ್ಯದಲ್ಲಿ ಏಕರೂಪದ ದರ ಪರಿಷ್ಕರಣೆ ಆಗಬೇಕೆಂದು ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ರಾಜ್ಯ ಸಾರಿಗೆ ಸಚಿವರು ಪೂರಕವಾಗಿ ಸ್ಪಂಧಿಸಿರುವುದು ಸ್ವಾಗತಾರ್ಹ ಎಂದವರು ಹೇಳಿದ್ದಾರೆ.
ಆದ್ದರಿಂದ ಸರಕಾರಿ ಒಡೆತನದ ಸಾರಿಗೆ ನಿಗಮಗಳಿಗೆ ದರ ಹೆಚ್ಚು ಮಾಡುವ ಸಂದರ್ಭ ದಲ್ಲಿ ರಾಜ್ಯದ ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಒಂದೇ ಕಾಲದಲ್ಲಿ ದರ ಪರಿಷ್ಕರಣೆ ಮಾಡಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಛಾತ್ರ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.