​ಮುಡಿಪು: ಹೊಲಿಗೆ ಯಂತ್ರಗಳ ವಿತರಣೆ

Update: 2021-02-18 15:06 GMT

ಮುಡಿಪು, ಫೆ.18: ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಹೊಲಿಗೆ ತರಬೇತಿ ಪಡೆದವರಿಗೆ ಉಚಿತ ಹೊಲಿಗೆ ಯಂತ್ರವನ್ನು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ ವಿತರಿಸಿದರು,
ಚಿತ್ತಾರ ಬಳಗ, ಅಪ್ನಾದೇಶ್ ಹಾಗೂ ಜನಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳ ತಾಪಂ ಅಧ್ಯಕ್ಷ ಕೆ. ಚಂದ್ರಹಾಸ ಕರ್ಕೇರ, ತಾಪಂ ಸದಸ್ಯ ಹೈದರ್ ಕೈರಂಗಳ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಶುಭ ಹಾರೈಸಿದರು.

ಕಡಬ ಕುಂತೂರಿನ ವಿದ್ಯಾರ್ಥಿ ಸುಭಾಶ್ ಅವರ ವಿದ್ಯಾಭ್ಯಾಸ ಮುಂದುವರಿಸಲು ಚಿತ್ತಾರ ಬಳಗ ಹಾಗೂ ದಿವಾಕರ ಪಾಂಡೇಶ್ವರ ಪ್ರಾಯೋಜಿಸಿದ 15,000 ರೂ.ವನ್ನು ಈ ಸಂದರ್ಭ ವಿತರಿಸಲಾಯಿತು.

ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ರಝಿಯ, ಉಪಾಧ್ಯಕ್ಷೆ ಲಕ್ಷ್ಮಿ ಸದಸ್ಯರಾದ ಶಮೀಮಾ, ಅಬ್ಬಾಸ್, ಝಹರಾ, ಪಿಡಿಒ ಸುನಿಲ್‌ಕುಮಾರ್, ಬಾಪು ಘನ ಸಂಪನ್ಮೂಲ ಘಟಕ ಸುತಿಯ ಅಧ್ಯಕ್ಷೆ ಇಬ್ರಾಹೀಂ ತಪಸ್ಯ, ಪ್ರಾಂಶುಪಾಲ ಶರತ್ ಕುಮಾರ್, ಸ್ವಚ್ಚತಾ ಸೇನಾನಿಗಳಾದ ಇಸ್ಮಾಯೀಲ್, ವಿದ್ಯಾ, ಅಬೂಬಕ್ಕರ್ ಉಪಸ್ಥಿತರಿದ್ದರು.

ಚಿತ್ತಾರ ಬಳಗದ ಸಂಚಾಲಕ ಸತೀಶ್ ಇರಾ ಸ್ವಾಗತಿಸಿದರು. ಬಳಗದ ಸದಸ್ಯ ಕಲ್ಲೂರು ನಾಗೇಶ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ ವಂದಿಸಿದರು. ಚಿತ್ತಾರ ಬಳಗದ ಚಂದ್ರಶೇಖರ ಪಾತೂರು ಮತ್ತು ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News