ಎಚ್-1ಬಿ ವೀಸಾ ವಿತರಣೆಗೆ ಅಗತ್ಯ ಅರ್ಜಿ ಸ್ವೀಕಾರ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ

Update: 2021-02-18 17:19 GMT

ವಾಶಿಂಗ್ಟನ್, ಫೆ. 18: 2021ರ ಸಾಲಿಗೆ ಗರಿಷ್ಠ 65,000 ಎಚ್-1ಬಿ ವೀಸಾ ವಿತರಣೆಗೆ ಅಗತ್ಯವಾಗಿರುವಷ್ಟು ಅರ್ಜಿಗಳು ಬಂದಿವೆ ಹಾಗೂ ವಿಜೇತರನ್ನು ಕಂಪ್ಯೂಟರೀಕೃತ ಲಾಟರಿ ಮೂಲಕ ಆರಿಸಲಾಗುವುದು ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.

ಅತ್ಯುನ್ನತ ತಾಂತ್ರಿಕ ಕೌಶಲ ಹೊಂದಿರುವ ವಿದೇಶೀಯರಿಗೆ ಅಮೆರಿಕದ ಕಂಪೆನಿಗಳಲ್ಲಿ ಕೆಲಸ ಮಾಡಲು ಎಚ್-1ಬಿ ವೀಸಾಗಳನ್ನು ನೀಡಲಾಗುತ್ತದೆ. ಭಾರತೀಯರು ಮತ್ತು ಚೀನೀಯರು ಇದರ ಪ್ರಧಾನ ಫಲಾನುಭವಿಗಳಾಗಿದ್ದಾರೆ.

2021ರ ಹಣಕಾಸು ವರ್ಷದಲ್ಲಿ, 65,000 ಎಚ್-1ಬಿ ವೀಸಾಗಳು ಮತ್ತು ಅಮೆರಿಕದಲ್ಲೇ ಉನ್ನತ ವಿದ್ಯಾಭ್ಯಾಸ ಮಾಡಿದವರಿಗೆ ನೀಡಲಾಗುವ 20,000 ವಿಶೇಷ ಎಚ್-1ಬಿ ವೀಸಾಗಳನ್ನು ವಿತರಿಸಲು ಅಗತ್ಯವಾಗಿರುವಷ್ಟು ಅರ್ಜಿಗಳು ಬಂದಿವೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News