×
Ad

ಕೊರೋನ ಲಸಿಕೆಯ ನ್ಯಾಯೋಚಿತ ವಿತರಣೆಗೆ ಗುಟೆರಸ್ ಕರೆ

Update: 2021-02-18 23:04 IST

ನ್ಯೂಯಾರ್ಕ್, ಫೆ. 18: ಕೊರೋನ ವೈರಸ್‌ನ ಕಾಲದಲ್ಲಿ ಅದರ ಲಸಿಕೆಯನ್ನು ಜಾಗತಿಕವಾಗಿ ‘ಅಸಮಾನ ಮತ್ತು ಅನುಚಿತ’ವಾಗಿ ವಿತರಿಸುವ ಪ್ರವೃತ್ತಿಯನ್ನು ವಿಶ್ವಸಂಸ್ಥೆ ಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಟೀಕಿಸಿದ್ದಾರೆ.

ಬ್ರಿಟನ್ ವಿದೆಶ ಕಾರ್ಯಧರ್ಶಿ ಡಾಮಿನಿಕ್ ರಾಬ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆನ್‌ಲೈನ್ ಸಭೆಯಲ್ಲಿ ಗುಟೆರಸ್ ಈ ಟೀಕೆಯನ್ನು ಮಾಡಿದ್ದಾರೆ ಎಂದು ‘ಎನ್‌ಎಚ್‌ಕೆ ವರ್ಲ್ಡ್’ ವರದಿ ಮಾಡಿದೆ.

ಕೇವಲ 10 ದೇಶಗಳು ಒಟ್ಟು ಲಸಿಕೆಗಳ 75 ಶೇಕಡವನ್ನು ತೆಗೆದುಕೊಂಡಿವೆ ಹಾಗೂ 130ಕ್ಕೂ ಅಧಿಕ ದೇಶಗಳಿಗೆ ಇನ್ನೂ ಒಂದು ಡೋಸ್ ಕೂಡ ಸಿಕ್ಕಿಲ್ಲ ಎಂದು ಅವರು ನುಡಿದರು.

ಕೋವಿಡ್-19 ಲಸಿಕೆಗಳ ನ್ಯಾಯೋಚಿತ ವಿತರಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿರುವ ‘ಕೋವ್ಯಾಕ್ಸ್’ ಕಾರ್ಯಕ್ರಮಕ್ಕೆ ಬೆಂಬಲ ನೀಡುವಂತೆ ಅವರು ವಿಶ್ವಸಂಸ್ಥೆಯ ಸದಸ್ಯ ದೇಶಗಳನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News