ಮಂಗಳೂರು : ಇನ್-ಲ್ಯಾಂಡ್ ಪ್ರಾಪರ್ಟಿ ಮೇಳ-2021ಗೆ ಅಭೂತಪೂರ್ವ ಸ್ಪಂದನೆ

Update: 2021-02-19 10:46 GMT

ಮಂಗಳೂರು : ಕರ್ನಾಟಕದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ  ಇನ್-ಲ್ಯಾಂಡ್ ಬಿಲ್ಡರ್ಸ್ ಆಯೋಜಿಸಿರುವ ಮೂರನೇ ವರ್ಷದ 20 ದಿನಗಳ ಪ್ರಾಪರ್ಟಿ-ಮೇಳ-2021 ಮಂಗಳೂರಿನ ನವಭಾರತ್ ವೃತ್ತ ಸಮೀಪದ ಇನ್‍ಲ್ಯಾಂಡ್ ಆರ್ನೇಟ್ ಇಲ್ಲಿ ನಡೆಯುತ್ತಿದ್ದು ಜನತೆಯಿಂದ ಅಭೂತಪೂರ್ವ ಸ್ಪಂದನೆ ದೊರಕಿದೆ.

ಈ ಪ್ರಾಪರ್ಟಿ ಮೇಳವನ್ನು ಫೆ 8ರಂದು ಮಂಗಳೂರಿನ ಅತ್ಯಂತ ಹಿರಿಯ ನಾಗರಿಕ ಜೋ ಗೊನ್ಸಾಲ್ವಿಸ್ ಹಾಗೂ ದೈಜಿವರ್ಲ್ಡ್ ಮೀಡಿಯಾ ಇದರ ಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದ್ದರು.

ಇನ್-ಲ್ಯಾಂಡ್ ಆಯೋಜಿಸಿದ್ದ ಮೊದಲ ಎರಡು ಪ್ರಾಪರ್ಟಿ ಮೇಳಗಳು ಜನಪ್ರಿಯವಾದಂತೆಯೇ ಈ ಮೂರನೇ ಪ್ರಾಪರ್ಟಿ ಮೇಳವೂ ಅತ್ಯಂತ ಜನಪ್ರಿಯವಾಗಿ ಜನರ ಮನಸೂರೆಗೊಂಡಿದೆ. "ಕೋವಿಡ್ ಸಾಂಕ್ರಾಮಿಕದಿಂದಾಗಿ ಎಲ್ಲೆಡೆ ಇರುವ ನಿರಾಶಾದಾಯಕ ವಾತಾವರಣದ ನಡುವೆ ಈ ಬಾರಿ ಪ್ರಾಪರ್ಟಿ ಮೇಳ ನಡೆಸಬೇಕೇ ಅಥವಾ ಬೇಡವೇ ಎಂಬ  ದೊಡ್ಡ ನಿರ್ಧಾರವನ್ನು ನಾವು ಕೈಗೊಳ್ಳಬೇಕಾಗಿತ್ತು. ಆದರೆ ಇನ್-ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಈ ಹಿಂದೆ ಯಾವತ್ತೂ ದೊರಕಿದ್ದ ಉತ್ತಮ ಸ್ಪಂದನೆಯನ್ನು  ಗಮನಿಸಿ ನಾವು ಈ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಕೈಗೊಂಡೆವು. ನಾವು ಸರಿಯಾದ ನಿರ್ಧಾರವನ್ನೇ ಕೈಗೊಂಡೆವು ಎಂಬ ಸಮಾಧಾನ ಈಗ ನಮಗಿದೆ. ಈ ಪ್ರಾಪರ್ಟಿ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಜನರಿಗೆ ಇದು ಅತ್ಯುತ್ತಮ ಸಮಯ ಕೂಡ ಆಗಿದೆ. ಷೇರುಗಳು ಹಾಗೂ ಠೇವಣಿಗಳಲ್ಲಿ ಹೂಡಿಕೆ ಈಗಿನ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚು ರಿಸ್ಕ್  ಹೊಂದಿದೆ ಹಾಗೂ ರಿಯಲ್ ಎಸ್ಟೇಟ್ ಸ್ಥಿರ, ಸುರಕ್ಷಿತವಾಗಿದೆ ಎಂದು ಸಾಂಕ್ರಾಮಿಕದ ಸಂದರ್ಭ ಕಂಡು ಬಂದಿದೆ" ಎಂದು ಇನ್-ಲ್ಯಾಂಡ್ ಸಮೂಹದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾದ ಸಿರಾಜ್ ಅಹ್ಮದ್ ಹೇಳಿದರು.

"ಈ ಮೇಳದ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ನಾವು ನೈಜ ಹಾಗೂ ಭಾರೀ ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಉತ್ತಮ ಸ್ಥಳಗಳಲ್ಲಿ ರುವ ವಿವಿಧ ಯೋಜನೆಗಳನ್ನು ನಾವು ಆಫರ್ ಮಾಡುತ್ತಿದ್ದೇವೆ. ಇನ್-ಲ್ಯಾಂಡ್ ಕಟ್ಟಡಗಳು ಬೆಂಗಳೂರು, ಮಂಗಳೂರು, ಉಳ್ಳಾಲ ಹಾಗೂ ಪುತ್ತೂರಿನಲ್ಲಿವೆ. ರೂ 35 ಲಕ್ಷ ಮೇಲ್ಪಟ್ಟು ಫ್ಲ್ಯಾಟುಗಳು ಲಭ್ಯ" ಎಂದು ಅವರು ಹೇಳಿದರು.

"ನಾವು ಆಯೋಜಿಸಿರುವ ಈ ಪ್ರಾಪರ್ಟಿ ಮೇಳ ವಿಶಿಷ್ಟವಾಗಿದೆ. ನಾವು ಉದ್ದೇಶಪೂರ್ವಕವಾಗಿ 20 ದಿನಗಳ ಮೇಳ ಆಯೋಜಿಸಿದ್ದೇವೆ ಹಾಗೂ ನಮ್ಮ ಕಚೇರಿಯಲ್ಲಿಯೇ ಅದನ್ನು ನಡೆಸುತ್ತಿದ್ದೇವೆ. ಇದರಿಂದಾಗಿ ಗ್ರಾಹಕರಿಗೆ ನಮ್ಮ ಕಚೇರಿಗೆ ಭೇಟಿ ನೀಡಲು, ವಿವಿಧ ಯೋಜನೆ ಪ್ರದೇಶ ಗಳಿಗೆ ಭೇಟಿ ನೀಡಲು, ತಮ್ಮ ಆದ್ಯತೆಗಳ ಕುರಿತು ಚರ್ಚಿಸಲು, ಗೃಹ ಸಾಲ ಕುರಿತಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಚಾರವಿನಿಮಯ ನಡೆಸಲು ಹಾಗೂ ನಂತರ ತಮ್ಮ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತದೆ. ಗ್ರಾಹಕರು ನಮ್ಮ ಕಚೇರಿಗೆ ಭೇಟಿ ನೀಡುತ್ತಿರುವುದರಿಂದ ಅವರಿಗೆ ನಮ್ಮ ಸೇಲ್ಸ್ ತಂಡ ಮಾತ್ರವಲ್ಲದೆ ನಮ್ಮ ಅಕೌಂಟ್ಸ್, ಕಾನೂನು ತಂಡ ಹಾಗೂ ಅಗತ್ಯ ಬಿದ್ದಲ್ಲಿ ಎಂಡಿ ಜತೆ ಮಾನಾಡುವ ಅವಕಾಶವೂ ಇದೆ. ಇದು ಗ್ರಾಹಕರಲ್ಲಿ ಹೆಚ್ಚು ವಿಶ್ವಾಸ ಮೂಡಿಸುತ್ತದೆ" ಎಂದು ಇನ್-ಲ್ಯಾಂಡ್ ಸಮೂಹದ ನಿರ್ದೇಶಕರಾದ ಮೀರಜ್ ಯೂಸುಫ್ ಸಿರಾಜ್ ಹೇಳಿದರು.

"ಗ್ರಾಹಕರು ನಮ್ಮಿಂದ ಖರೀದಿಸಲು ಮುಖ್ಯ ಕಾರಣ ನಾವು ಆಫರ್ ಮಾಡುವ ಗುಣಮಟ್ಟದ ಯೋಜನೆಗಳು. ನಮ್ಮ ಹಲವು ಗ್ರಾಹಕರು, ಅವರ ಸಂಬಂಧಿಗಳು ಹಾಗೂ ಸ್ನೇಹಿತರು ಕೂಡ ನಮ್ಮೊಂದಿಗೆ  ಕಳೆದ 15-20 ವರ್ಷಗಳಿಂದ ಇದ್ದು,  ತಮ್ಮ ಎರಡನೇ ಮನೆ ಹಾಗೂ ವಾಣಿಜ್ಯ ಆಸ್ತಿಗಳನ್ನೂ ನಮ್ಮಿಂದ ಖರೀದಿಸುತ್ತಿದ್ಧಾರೆ. ನಮ್ಮ  ಗುಣಮಟ್ಟ ಪ್ರಕ್ರಿಯೆ ಐಎಸ್‍ಒ ಪ್ರಮಾಣೀಕೃತವಾಗಿದ್ದು ಇದರಿಂದ ಗ್ರಾಹಕರಿಗೆ ಲಾಭವಿದೆ. ನಮ್ಮಲ್ಲಿ ವಿಶಾಲವಾದ ಇನ್-ಹೌಸ್ ಡಿಸೈನ್ ಸ್ಟುಡಿಯೋ ಕೂಡ ಇದ್ದು ಗ್ರಾಹಕರ ಅಭಿರುಚಿಗೆ ತಕ್ಕಂತೆ  ಸುಂದರ ಮತ್ತು ಆಧುನಿಕ ಇಂಟೀರಿಯರ್ ಯೋಜನೆಗಳೂ ಲಭ್ಯವಿದೆ. ಇದು ನಮ್ಮಲ್ಲಿರುವ ಒಂದು ಪೂರಕ ಅಂಶ ಹಾಗೂ ಗ್ರಾಹಕರಿಗೆ ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗಲಿದೆ" ಎಂದು ಅವರು ವಿವರಿಸಿದರು.

ಇನ್-ಲ್ಯಾಂಡ್  ಕೂಡ ಇತ್ತೀಚೆಗೆ ಅತ್ಯಾಧುನಿಕ ವಾಣಿಜ್ಯ ಪ್ರಾಜೆಕ್ಟ್ -ಇನ್‍ಲ್ಯಾಂಡ್ ಬಿಸಿನೆಸ್ ಪಾರ್ಕ್ ಅನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಭಾರತ್ ಮಾಲ್ ಸಮೀಪ ಚಾಲನೆ ನೀಡಿದೆ. ಈ ವಾಣಿಜ್ಯ ಪ್ರಾಜೆಕ್ಟ್ ಸ್ಥಳೀಯ ಖರೀದಿದಾರರು ಹಾಗೂ ಎನ್ನಾರೈಗಳನ್ನು ಆಕರ್ಷಿಸುತ್ತಿದ್ದು ನಗರದ ಪ್ರಮುಖ ಭಾಗದಲ್ಲಿ ಕಚೇರಿ ಹೊಂದಲು ಬಯಸುವವರಿಗೆ ಇದು ಅನುಕೂಲವಾಗಲಿದೆ. ಮಂಗಳೂರು ಸ್ಮಾರ್ಟ್ ಸಿಟಿ ಎಂದು  ಘೋಷಣೆಯಾದ ನಂತರ ಇಲ್ಲಿ ಐಟಿ ಸಹಿತ ಹೆಚ್ಚಿನ ಉದ್ಯಮಗಳಿಗೆ ಪೂರಕವಾಗಿದೆ. ಹಲವು ವೈದ್ಯರೂ ಈಗಾಗಲೇ ಬಹಳಷ್ಟು ದಟ್ಟಣೆಯಿರುವ ಕಂಕನಾಡಿ/ಫಳ್ನೀರ್ ಬದಲು ಇಲ್ಲಿ  ತಮ್ಮ ಕ್ಲಿನಿಕ್ ಆರಂಭಿಸಲು ಉತ್ಸುಕತೆ ತೋರಿದ್ದಾರೆ.  ಒಂದು  ಪ್ರಯೋಜನಕಾರಿ ಅಂಶವೆಂದರೆ  ಗ್ರಾಹಕರು ನಿರ್ಮಾಣ ಅವಧಿಯುದ್ದಕ್ಕೂ ಕಂತಿನ ಮೂಲಕ ಮೊತ್ತವನ್ನು ಪಾವತಿಸಬಹುದಾಗಿದೆ," ಎಂದು ಅವರು ವಿವರಿಸಿದರು.

ಈಗಿನ ಮಿತ ದರಗಳನ್ನು ಪರಿಗಣಿಸಿದಾಗ ಮನೆ ಖರೀದಿಸಲು ಅಥವಾ ವಾಣಿಜ್ಯ ಸ್ಥಳ ಖರೀದಿಸಲು ಬಯಸುವವರಿಗೆ  ಈಗಿನ ಸಮಯಕ್ಕಿಂತ ಹೆಚ್ಚಿನ ಅನುಕೂಲಕರ ಸಮಯ ಮತ್ತೊಂದಿಲ್ಲ. ಈ ಸಾಂಕ್ರಾಮಿಕ ಅಂತ್ಯಗೊಂಡು ಆರ್ಥಿಕತೆ ಮತ್ತೆ ಪುಟಿದೇಳುವಾಗ ಮತ್ತೆ ಆಸ್ತಿ ದರಗಳು  ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ಆದುದರಿಂದ ಜಾಣ ಖದೀರಿದಾರರು ಈಗಲೇ ತಮ್ಮ ನಿರ್ಧಾರಗಳನ್ನು ಅಂತಿಮಗೊಳಿಸಿ ಹೂಡಿಕೆ ಮಾಡಿ  ರಿಯಾಯಿತಿ ದರದಲ್ಲಿ ಮನೆ ಅಥವಾ ವಾಣಿಜ್ಯ ಸ್ಥಳಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಈ ಪ್ರಾಪರ್ಟಿ ಮೇಳ ಇನ್ನೂ ಹತ್ತು ದಿನ ಮುಂದುವರಿಯಲಿದ್ದು ಈಗಾಗಲೇ ಹಲವು ಮಂದಿ ಖರೀದಿಸಲು ಮುಂದೆ ಬಂದಿದ್ದಾರೆ ಹಾಗೂ ಹಲವು ಯೋಜನೆಗಳು ಅತಿ ಶೀಘ್ರದಲ್ಲಿಯೇ ಸೋಲ್ಡ್ ಔಟ್ ಆಗುತ್ತಿವೆ.

ಪ್ರಾಪರ್ಟಿ ಮೇಳ ಸ್ಥಳ : 3ನೇ ಅಂತಸ್ತು, ಇನ್‍ಲ್ಯಾಂಡ್ ಆರ್ನೇಟ್, ನವಭಾರತ್ ವೃತ್ತ, ಮಂಗಳೂರು, ಫೆಬ್ರವರಿ 8ರಿಂದ ಫೆಬ್ರವರಿ 28, ಸಮಯ : ಬೆಳಿಗ್ಗೆ 9.30ರಿಂದ ಸಂಜೆ 7.30. ದೂರವಾಣಿ : 9972089099, 9972014055

ಇಮೇಲ್ : mktg.mlr@inlandbuilders.net

ವೆಬ್‍ಸೈಟ್ : www.inlandbuilders.net

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News