×
Ad

ದ.ಕ. ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ರಾಜ್ಯ ವಕ್ಫ್ ಸದಸ್ಯರು ಭೇಟಿ-ಪರಿಶೀಲನೆ

Update: 2021-02-19 16:29 IST

ಮಂಗಳೂರು, ಫೆ.19: ದ.ಕ.ಜಿಲ್ಲೆಯ ವಿವಿಧ ವಕ್ಫ್ ಸಂಸ್ಥೆಗಳಿಗೆ ರಾಜ್ಯ ವಕ್ಫ್ ಸದಸ್ಯರಾದ ಮೌಲಾನಾ ಶಾಫಿ ಸಅದಿ ಹಾಗೂ ಯಾಕೂಬ್ ಯೂಸುಫ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರ ಹೊರವಲಯದ ಅಡ್ಯಾರ್ ಕಣ್ಣೂರು ಫಾತಿಮಾ ವಕ್ಫ್ ಎಸ್ಟೇಟ್‌ಗೆ ಭೇಟಿ ನೀಡಿದರು. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣ ಸಮೀಪದ ಮರವೂರು ಮತ್ತು ಕೆಂಜಾರ್‌ನಲ್ಲಿ ಹಜ್ ಭವನಕ್ಕೆ ಮೀಸಲಿಟ್ಟ ಸರಕಾರಿ ಜಮೀನಿನ ಪರಿಶೀಲನೆ ಮಾಡಿ ಈ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳ ತ್ವರಿತ ಇತ್ಯರ್ಥದ ಬಗ್ಗೆ ಸಂಬಂದಪಟ್ಟವರೊಂದಿಗೆ ಚರ್ಚೆ ನಡೆಸಿದರು.

ಅಲ್ಲದೆ ನಗರದ ಹೃದಯ ಭಾಗದಲ್ಲಿರುವ ಕಚ್ಚಿಮೆಮನ್ ಮಸೀದಿ ಮತ್ತು ಮಸೀದಿಯ ಕಬಳಿಕೆಯಾದ ಭೂಮಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಕಟ್ಟಡವನ್ನು ಪರಿಶೀಲನೆ ಮಾಡಿದರು.

ರಾಜ್ಯ ಹಜ್ ಸಮಿತಿ ಸದಸ್ಯ ಹನೀಫ್ ನಿಝಾಮಿ, ವಕ್ಫ್ ಆಡಳಿತಾಧಿಕಾಧಿ ನಿವೃತ್ತ ಸೈನಿಕ ರಫಿ ಅಹ್ಮದ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News