×
Ad

‘ನನ್ನ ಮೆಸ್ಕಾಂ’ ಮೊಬೈಲ್ ಆ್ಯಪ್ ಬಿಡುಗಡೆ

Update: 2021-02-19 19:03 IST

ಮಂಗಳೂರು, ಫೆ. 19: ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್‌ಸಿ)ದ ಸಾರ್ವಜನಿಕ ವಿಚಾರಣಾ ಸಭೆಯಲ್ಲಿ ಮೆಸ್ಕಾನಿಂದ ‘ನನ್ನ ಮೆಸ್ಕಾಂ’ ಎಂಬ ನೂತನ ಮೊಬೈಲ್ ಆ್ಯಪ್‌ನ್ನು ಆಯೋಗದ ಅಧ್ಯಕ್ಷ ಶಂಭು ಯಾಳ್ ಮೀನ ಬಿಡುಗಡೆಗೊಳಿಸಿದರು.

ಗ್ರಾಹಕ ಸ್ನೇಹಿ ಕಾರ್ಯಕ್ರಮದನ್ವಯ ಆ್ಯಂಡ್ರಾಯ್ಡಾ ಮತ್ತು ಐಒಎಸ್ ವೇದಿಕೆಯಲ್ಲಿ ನನ್ನ ಮೆಸ್ಕಾಂ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸ ಲಾಗಿದ್ದು, ಇದು ಹಲವಾರು ವೈಶಿಷ್ಟತೆಗಳಿಂದ ಕೂಡಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

ಒಂದು ಅಥವಾ ಹೆಚ್ಚಿನ ಖಾತೆಗಳ ನೋಂದಣಿಗೆ ಅವಕಾಶ, ಒಂದು ಅಥವಾ ಗುಂಪು ಆವತಿಗೆ ‘ವನ್ ಟಚ್’ನಲ್ಲಿ ಅವಕಾಶ. ಹೆಚ್ಚುವರಿ ಭದ್ರತಾ ಠೇವಣಿಯ ಪಾವತಿಗೆ ಅವಕಾಶ. ಬಿಲ್ ಮತ್ತು ಪಾವತಿ ರಶೀದಿಗಳನ್ನು ಪಿಡಿಎಫ್ ಮೂಲಕ ಡೌನ್‌ಲೋಡ್, ಮುಂಬರುವ ಒಂದು ವಾರದ ವಿದ್ಯುತ್ ನಿಲುಗಡೆ/ವ್ಯತ್ಯಯದ ಮಾಹಿತಿ, ಹಿಂದಿನ ವಿದ್ಯುತ್ ಬಳಕೆ, ಪಾವತಿ ಮತ್ತು ಬಾಕಿ ಲೆಕ್ಕಾಚಾರಗಳ ಮಾಹಿತಿ ಡ್ಯಾಶ್‌ಬೋರ್ಡ್, ದೂರು ನೋಂದಣಿ, ಸ್ಟೇಟಸ್ ಟ್ರಾಕಿಂಗ್ ಮೊದಲಾದ ಹಲವಾರು ಸೌಲಭ್ಯಗಳು ಈ ವ್ಯವಸ್ಥೆಯಲ್ಲಿದೆ ಎಂದು ಅವರು ವಿವರಿಸಿದರು.

ನಗದು ರಹಿತ ಪಾವತಿಯ ಸೇವೆಯ ಭಾಗವಾಗಿ ಪಿಒಎಸ್ ಟರ್ಮಿನಲ್‌ಗಳ ಮಾದ್ಯಮದ ಮೂಲಕ ಪಾವತಿ ವ್ಯವಸ್ಥೆಗೆ ಮೆಸ್ಕಾಂ ಮುಂದಾಗಿದ್ದು, ತನ್ನ ವ್ಯಾಪ್ತಿಯ 78 ನಗದು ಮುಂಗಟ್ಟೆಳಲ್ಲಿ ಈ ಸಾಧನಗಳನ್ನು ಮಾರ್ಚ್‌ನಲ್ಲಿ ಅಳವಡಿಸಲು ಕ್ರಮ ಕೈೊಳ್ಳಲಾಗಿದೆ ಎಂದವರು ಹೇಳಿದರು.
ಈ ವ್ಯವಸ್ಥೆಯಡಿ ವಿದ್ಯುತ್ ಬಿಲ್‌ಗಳನ್ನು ಡೆಬಿಟ್/ ಕ್ರೆಡಿಟ್/ ಚಿಪ್ ಕಾರ್ಡ್ಸ್/ ಸಂಪರ್ಕ ರಹಿತ ಪಾವತಿಯ ಮೂಲಕ ಪಾವತಿಸಬಹುದು. ಪಾವತಿಯ ತಕ್ಷಣ ಗ್ರಾಹಕರ ಖಾತೆಗೆ ಹಣ ಜಮಾಗೊಂಡು ರಶೀದಿಯ ಪ್ರತಿಯನ್ನೂ ಪಡೆಯಬಹುದು ಎಂದು ಅವರು ಹೇಳಿದರು.
ಆಯೋಗದ ಸದಸ್ಯರಾದ ಎಚ್.ಎನ್. ಮಂಜುನಾಥ್ ಮತ್ತು ಎಂ.ಡಿ.ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News