ದ.ಕ. ಜಿಪಂ ಸಿಇಒ ಡಾ. ಕುಮಾರ್ ಅಧಿಕಾರ ಸ್ವೀಕಾರ
Update: 2021-02-19 19:07 IST
ಮಂಗಳೂರು, ಫೆ.19: ದ.ಕ. ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ಕುಮಾರ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ 2018ರ ಮಾರ್ಚ್ 21 ರಿಂದ 2018ರ ಜೂನ್ 26 ರವರೆಗೆ ಹಾಗೂ 2019ರ ಫೆಬ್ರವರಿ 15 ರಿಂದ 2021ರ ಫೆಬ್ರವರಿ 17 ರವರೆಗೆ ಕಾರ್ಯನಿರ್ವಹಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 2015ರ ಆ.12ರಿಂದ 2018ರ ಮಾ.17ರವರೆಗೆ ಹಾಗೂ 2018ರ ಜೂ.29ರಿಂದ 2019ರ ಫೆ.13ರವರೆಗೆ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.