‘ನಿರಾಮಯ’ ಯೋಜನೆಯಡಿ ಅರ್ಜಿ ಆಹ್ವಾನ
Update: 2021-02-19 19:16 IST
ಮಂಗಳೂರು, ಫೆ.19: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುಷ್ಠಾನಗೊಂಡಿರುವ ನ್ಯಾಷನಲ್ ಟ್ರಸ್ಟ್ ಕಾಯ್ದೆ ಅಡಿ ಬರುವ ಆಟಿಸಂ, ಸೆರೆಬ್ರಲ್ ಪಾಲ್ಸಿ, ಬುದ್ಧಿಮಾಂದ್ಯತೆ (ಮೆಂಟಲ್ ರಿಟಾರ್ಡೇಶನ್) ಹಾಗೂ ಬಹು ವೈಕಲ್ಯತೆ (ಮಲ್ಟಿಪಲ್ ಡಿಸೆಬಿಲಿಟಿ) ಹೊಂದಿರುವ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರವು ‘ನಿರಾಮಯ’ ಎಂಬ ಆರೋಗ್ಯ ವಿಮಾ ಯೋಜನೆ, ಪೋಷಕರ ನೇಮಕಾತಿ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸೇವಾ ಭಾರತಿ, ಮಂಗಳೂರು, ದೂ.ಸಂ.: 0824-2458173, 9036493397 ಅಥವಾ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.