×
Ad

‘ದಲಿತ ಕೋಟ್ಯಾಧಿಪತಿಗಳು’ ಕೃತಿ ಬಿಡುಗಡೆ

Update: 2021-02-19 19:42 IST

ಉಡುಪಿ, ಫೆ.19: ಲೇಖಕ ಯು.ಶ್ರೀಧರ್ ಮಣಿಪಾಲ ಅನುವಾದಿಸಿರುವ ಬೆಂಗಳೂರಿನ ವಂಶಿ ಪಬ್ಲಿಕೇಶನ್ ಪ್ರಕಾಶನದ ‘ದಲಿತ ಕೋಟ್ಯಾಧಿಪತಿ ಗಳು’ ಕೃತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಶುಕ್ರವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆ ಗೊಳಿಸಿದರು.

ಬಳಿಕ ಮಾತನಾಡಿದ ಅವರು, ಇದು ಅಮೂಲ್ಯವಾದ ಕೃತಿಯಾಗಿದೆ. ಇದರಲ್ಲಿನ ಎಲ್ಲ ಸಾಧಕರಲ್ಲೂ ಭಿನ್ನತೆ ಇದೆ. ಜೀವನ ಬೆಳಣಿಗೆಗೆ ಈ ಕೃತಿ ಪೂರಕವಾಗಿದೆ ಎಂದು ಹೇಳಿದರು.

ಯು.ಶ್ರೀಧರ್ ಮಾತನಾಡಿ, ಮಿಲಿಂದ್ ಖಂಡೇಕರ್ ಹಿಂದಿಯಲ್ಲಿ ಬರೆದ ಈ ಕೃತಿಯನ್ನು ಡಾ.ವಂದನಾ ಸಿಂಗ್ ಮತ್ತು ರೀನುಪ ತಲ್ವಾರರು ಆಂಗ್ಲ ಭಾಷೆಗೆ ಅನುದಾನ ಮಾಡಿದ್ದಾರೆ. ಸಮಾಜದಲ್ಲಿ ತೀರಾ ನಿಕೃಷ್ಟ ಸ್ಥಿತಿಯಲ್ಲಿ ಮತ್ತು ಹತ್ತಿಕ್ಕಲ್ಪಟ್ಟ ದಲಿತ ಸಮಾಜದ 15 ವ್ಯಕ್ತಿಗಳ ಕುರಿತ ಈ ಪುಸ್ತಕದ ಕಥೆಗಳು ಎಲ್ಲರಿಗೂ ಸ್ಪೂರ್ತಿದಾಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ, ಸುಗುಣ ಶ್ರೀಧರ್, ಉಡುಪಿ ಮಾಸ್ತಿ ಗ್ರಾಫಿ್ಸ್ನ ಮಾಸ್ತಿ ವಿಜಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News