×
Ad

​ಫೆ.20ರಂದು ಕಾರ್ಕಳ, ಕಾಪುಗೆ ಸಚಿವ ಬೊಮ್ಮಾಯಿ

Update: 2021-02-19 19:56 IST

ಉಡುಪಿ, ಫೆ.19: ರಾಜ್ಯದ ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಫೆ.20ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಕಾರ್ಕಳ ನಗರ ಠಾಣೆಯ ಬಳಿ ಇರುವ ಪೊಲೀಸ್ ವಸತಿ ಗೃಹದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಅಪರಾಹ್ನ 2 ಗಂಟೆಗೆ ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಹಾಗೂ ವಕೀಲರ ಸಂಘ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯಗಳ ಸಂಕೀರ್ಣದ ಉದ್ಘಾಟನಾ ಸಮಾರಂಭ ಹಾಗೂ 3:30ಕ್ಕೆ ಕಾಪು ಪೊಲೀಸ್ ಠಾಣೆ ಬಳಿ ಇರುವ ಕಾಪು ಪೊಲೀಸ್ ವಸತಿ ಗೃಹದ ನೂತನ ಕಟ್ಟಡ ಉದ್ಘಾಟನಾ ಸಮಾರಂದಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ತೆರಳಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News