×
Ad

ಹೆದ್ದಾರಿ ಬದಿ ಕಸ ಎಸೆಯುವವರಿಂದ ದಂಡ ವಸೂಲಿ

Update: 2021-02-19 20:01 IST

ಉಡುಪಿ, ಫೆ.19: ರಾಷ್ಟ್ರೀಯ ಹೆದ್ದಾರಿ 66ರ ಎರಡೂ ಬದಿಯ ಕಸವನ್ನು ಕಳೆದ ಫೆ.13ರಂದು ನಗರಸಭೆಯ ಅಧ್ಯಕ್ಷರು, ಅಪರ ಜಿಲ್ಲಾಧಿಕಾರಿ ಹಾಗೂ ನಗರಸಬೆಯ ಪೌರಾಯುಕ್ತರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದರು.

ಆದರೆ ಜನರು ಹೆದ್ದಾರಿ ಬದಿಗೆ ಕಸ ಎಸೆಯುವುದನ್ನು ಮತ್ತೆ ಪುನಃ ಮುಂದುವರೆಸಿದ್ದು, ಶುಕ್ರವಾರ ಬೆಳಗ್ಗೆ ನಗರಸಭೆಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಕೆಎಸ್‌ಆರ್‌ಟಿಸಿ ನಿಗಮದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆಯುವವರನ್ನು ಹಿಡಿದು ದಂಡ ವಸೂಲಿ ಮಾಡಿದ್ದಾರೆ.

ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ದಂಡ ವಸೂಲಿ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News