ಕಾಜೂರು ಉರೂಸ್ ಗೆ ಚಾಲನೆ, ಸನ್ಮಾನ ಕಾರ್ಯಕ್ರಮ

Update: 2021-02-19 16:05 GMT

ಬೆಳ್ತಂಗಡಿ : ತಂತ್ರಜ್ಞಾನ ಮತ್ತು ಅಭಿವೃದ್ಧಿಯ ವೇಗದ ಮಧ್ಯೆ ಮಾನವೀಯತೆ ಮರೀಚಿಕೆಯಾಗುತ್ತಿದ್ದು, ತಾಯಿ ಮಕ್ಕಳನ್ನು, ಪತಿ-ಪತ್ನಿಯನ್ನು ಪರಸ್ಪರ ಕತ್ತು ಕೊಯ್ಯುವ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಅಲ್ಲಾಹನ ಪ್ರೀತಿಪಾತ್ರರಾಗಿದ್ದ ಔಲಿಯಾಗಳು ಆತ್ಮಶುದ್ಧಿಯಿಂದ ಜೀವಿಸಿದ್ದು, ಅವರ ನೋಟ ನಮ್ಮ ಕಡೆಗೆ ಇರಬೇಕಾದರೆ ಮೂಢನಂಬಿಕೆ ರಹಿತ ಹೃದಯ ಶುದ್ಧಿ ನಮ್ಮದಾಗಬೇಕಾಗಿದೆ ಎಂದು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಹೇಳಿದರು.

ಅವರು ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಮಹಾಸಂಭ್ರಮವನ್ನು ಶುಕ್ರವಾರ ಉದ್ಘಾಟಿಸಿ, ಬಳಿಕ‌ ನಡೆದ ಸನ್ಮಾನವನ್ನು ಸ್ವೀಕರಿಸಿ  ಮಾತನಾಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ‌ ಸಯ್ಯಿದ್ ಕಾಜೂರು ತ‌ಂಙಳ್ ಮಾತನಾಡಿ, ಕಣ್ಣಿಗೆ ಕಾಣದ ವೈರಸ್ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಸೇರಿದಂತೆ ಮನುಷ್ಯರನ್ನು ನಿಯಂತ್ರಿಸಿದ ರೀತಿ ಆಶ್ಚರ್ಯ ತಂದಿದೆ. ಆದ್ದರಿಂದ ನಮ್ಮ ನಡೆಯ ಬಗ್ಗೆ ಎಚ್ವರ ವಹಿಸಿ ಮುನ್ನಡೆಯಬೇಕಿದೆ.‌ ಈ ‌ಜಗತ್ತು ಅಲ್ಲಾಹನ‌ ನಿಯಂತ್ರಣದಲ್ಲಿದೆ ಎಂಬುದನ್ನು ಮರೆತು ನಡೆಯಬಾರದು ಎಂದು ಎಚ್ಚರಿಸಿದರು.

ಕಾಜೂರು‌ ಮುದರ್ರಿಸ್ ಕೆ.ಎಚ್ ಸಿರಾಜುದ್ದೀನ್ ಝುಹುರಿ, ಕಿಲ್ಲೂರು ಮುದರ್ರಿಸ್ ರಫೀಕ್ ಸ‌ಅದಿ,  ಕಾಜೂರು ಮಾಜಿ ಅಧ್ಯಕ್ಷ ಕೆ ಶೇಕಬ್ಬ, ಹಮೀದ್‌ ಫೈಝಿ ಕಿಲ್ಲೂರು,  ಲೈವ್ ಮೀಡಿಯಾ ನ್ಯೂಸ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ ಮುಂಡಾಜೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಜೂರು ಉರೂಸ್ ಸಮಿತಿ ಉಪಾಧ್ಯಕ್ಷ ಕೆ. ಮುಹಮ್ಮದ್ , ಪ್ರ.‌ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಜೊತೆ ಕಾರ್ಯದರ್ಶಿ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಮ್‌ ಕಮಾಲ್, ಅಬೂಬಕ್ಕರ್ ಮಲ್ಲಿಗೆ ಮನೆ, ಮಾಜಿ‌ ಅಧ್ಯಕ್ಷರಾದ ಉಮರ್ ಸಖಾಫಿ, ಬಿ.ಎ ಯೂಸುಫ್ ಶರೀಫ್, ಇಬ್ರಾಹಿಂ ಮದನಿ, ಕೆ.ಎ  ಅಬೂಬಕ್ಕರ್ ಹಾಜಿ, ಪಿ.ಎ‌ ಮುಹಮ್ಮದ್, ಮುಹಮ್ಮದ್ ಸಖಾಫಿ, ಪ್ರಮುಖರಾದ 
ಅಬ್ದುಲ್ ರಹಿಮಾನ್ ಅದ್ದಾಕ, ಇಸ್ಮಾಯಿಲ್‌ ಫೈಝಿ ಕಿಲ್ಲೂರು,  ಯಾಕೂಬ್ ಅಜಿಕುರಿ,  ಬಿ.ಹೆಚ್ ಅಬೂಬಕ್ಕರ್ ಹಾಜಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು, ವೈಸ್ ಪ್ರಿನ್ಸಿಪಲ್ ಅಬ್ದುಲ್‌ ಖಾದರ್ ಸ‌ಅದಿ, ನಾಸಿರ್ ಮಾಸ್ಟರ್, ಮನೇಜರ್ ಶಮೀಮ್, ಮುಹಮ್ಮದ್ ರಫಿ, ಗ್ರಾ.ಪಂ ಸದಸ್ಯರಾದ ಕೆ.ಯು ಮುಹಮ್ಮದ್ ಮತ್ತು ಶಾಹುಲ್ ಹಮೀದ್ ಕಿಲ್ಲೂರಿ,  ಬಿ.ಕೆ‌ ಅಬ್ಬಾಸ್ ಗೋಳಿಯಂಗಡಿ, ನಾಸಿರ್ ಪಾಶಾ, ನಝೀರ್ ಮಠ, ನವಾಝ್‌ಶರೀಫ್ ಕಟ್ಟೆ, ಅಬೂಬಕ್ಕರ್ ಬದ್ಯಾರ್, ಹಂಝ ಕಿಲ್ಲೂರು, ಸಿದ್ದೀಕ್ ಕೆ.ಹೆಚ್, ಬದ್ರುದ್ದೀನ್ ಕಾಜೂರು ಮೊದಲಾದವರು ಉಪಸ್ಥಿತರಿದ್ದರು.

ಉರೂಸ್ ಸಮಿತಿ ಅಧ್ಯಕ್ಷ ‌ಕೆ.ಯು ಇಬ್ರಾಹಿಂ  ಸ್ವಾಗತಿಸಿದರು. ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News