ಮಂಚಿ ಕೈಯ್ಯೂರ್ ಸುನ್ನೀ ಮಹಲ್ ನಲ್ಲಿ ಅಜ್ಮೀರ್ ಆಂಡ್ ನೇರ್ಚೆ
Update: 2021-02-21 23:32 IST
ಬಿ.ಸಿ.ರೋಡ್ : ಪೆ.21, ಸುನ್ನೀ ಮಹಲ್ ಮಂಚಿ ಕೈಯ್ಯೂರಿನಲ್ಲಿ 8 ನೇ ಅಜ್ಮೀರ್ ಆಂಡ್ ನೇರ್ಚೆಯು ಇತ್ತೀಚಗೆ ಸಯ್ಯಿದ್ ಮಶ್ಹೂರ್ ಮುಲ್ಲಕ್ಕೋಯ ತಂಙಳ್ ವಾವಾಡ್ ಕೇರಳ ರವರ ನೇತೃತ್ವದಲ್ಲಿ ನಡೆಯಿತು.
ಸುನ್ನೀ ಮಹಲ್ ಸಾರಥಿ ಎಣ್ಮೂರು ಉಸ್ತಾದ್ ಧ್ವಜಾರೋಹಣಗೈದರು . ಮಗ್ರಿಬ್ ನಮಾಝಿನ ಬಳಿಕ ಅಜ್ಮೀರ್ ಮೌಲಿದ್ ಪಾರಾಯಣವು ಮಂಚಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾಲೆಮಂಡೋವು ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಮಹಮ್ಮದಲಿ ಸಖಾಫಿ ಅಶ್ ಅರಿಯ್ಯ, ಬೊಳ್ಮಾರು ಉಸ್ತಾದ್, ಸಾಲಿಂ ಸಅದಿ, ಟಿ.ಕೆ. ಸಅದಿ, ರಝ್ಝಾಕ್ ಸಖಾಫಿ, ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಬೂಬಕ್ಕರ್ ಸೆರ್ಕಳ ಮೊದಲಾದವರು ಉಪಸ್ಥಿತರಿದ್ದರು.
ಅಬೂಬಕ್ಕರ್ ಲತೀಫೀ ಎಣ್ಮೂರು ಸ್ವಾಗತಿಸಿ, ವಂದಿಸಿದರು.