×
Ad

ಗ್ರಾ.ಪಂ.ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಭಟ್ಕಳ ತಾ.ಪಂ ವ್ಯವಸ್ಥಾಪಕ ಸುಧೀರ್ ಗಾಂವಕರ್ ಬೀಳ್ಕೊಡುಗೆ

Update: 2021-02-21 23:58 IST

ಭಟ್ಕಳ: ಭಟ್ಕಳ ತಾಲೂಕ ಪಂಚಾಯತದಲ್ಲಿ ಸುಮಾರು 15 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕಛೇರಿಗೆ ವರ್ಗಾವಣೆಯಾದ ಸುಧೀರ ಗಾಂವಕರ್ ರವರನ್ನು ಭಟ್ಕಳ ಗ್ರಾಮ ಪಂಚಾಯತ ನೌಕರರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಿ ಬಿಳ್ಕೋಡಲಾಯಿತು.

ಭಟ್ಕಳ ಪ್ರವಾಸಿ ಮಂದಿರಲ್ಲಿ ತಾ.ಪಂ ಕಾರ್ಯನಿರ್ವಾಹಕ ಆಧಿಕಾರಿ ಪ್ರಭಾಕರ ಎಸ್. ಚಿಕ್ಕನ್ಮನೆ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸುಧೀರ ಗಾಂವಕರ್ ರವರ ಸೇವೆಯನ್ನು ಸ್ಮರಿಸಿ ಹಾರಾರ್ಪಣೆ ಗೈದು ಶಾಲು ಹೊದಿಸಿ ಫಲ ತಾಂಬೂಲ ಸ್ಮರಣಿಕೆ ಇಟ್ಟು ಸನ್ಮಾನಿಸಲಾಯಿತು.

 ವೇದಿಕೆಯಲ್ಲಿ ತಾ.ಪಂ. ವ್ಯವಸ್ಥಾಪಕ ಕೃಷ್ಣಕಾಂತ ನಾಯ್ಕ, ಗ್ರಾ.ಪಂ. ಕಾರ್ಯದರ್ಶಿಗಳ ಅಧ್ಯಕ್ಷರಾದ ಮಾರುತಿ ದೇವಾಡಿಗ, ಗ್ರಾಮ ಪಂಚಾಯತ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷರಾದ ಯೋಗೇಶ ನಾಯ್ಕ ಉಪಸ್ಥಿತರಿದ್ದರು. ವಿನಾಯಕ ಆಚಾರಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News