ಕಾಂಗ್ರೆಸ್‌ನಿಂದ ಜನಧ್ವನಿ ಪಾದಯಾತ್ರೆಗೆ ಚಾಲನೆ

Update: 2021-02-22 06:47 GMT

ಪಡುಬಿದ್ರಿ: ಕೇಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರಸ್ ಸಮಿತಿ ಆಯೋಜಿಸಿದ ಹೆಜಮಾಡಿಯಿಂದ ಬೈಂದೂರು ತನಕ ಜನಧ್ವನಿ ಪಾದಯಾತ್ರೆ ಸೋಮವಾರ ಆರಂಭಗೊಂಡಿತು.

ಫೆಬ್ರವರಿ 27ರವರೆಗೆ ನಡೆಯುವ ಈ ಪಾದಯಾತ್ರೆಗೆ ಹೆಜಮಾಡಿ ಪೇಟೆಯಲ್ಲಿ ಉದ್ಘಾಟನೆಗೊಂಡಿತು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ವರ್ಚುವಲ್ ಮೂಲಕ ಉದ್ಘಾಟಿಸಿದರು. ಕೇಂದ್ರದ ಜನವಿರೋಧಿ ನೀತಿಯನ್ನು ಜನ ಮನಗಂಡು ಜನರಿಗೆ ಸುಖಕರವಾಗಿ ಸರಕಾರ ಬರಲಿ ಎಂದು ಶುಭಹಾರೈಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಗೋಪಾಲ ಪೂಜಾರಿ, ಎಂ.ಎ.ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮುಖಂಡರಾದ  ನವೀನ್‌ಚಂದ್ರ ಜೆ. ಶೆಟ್ಟಿ, ಎಂ.ಪಿ. ಮೊಯಿದಿನಬ್ಬ, ಧಜನಂಯ್ ಮಟ್ಟು, ವೈ. ಸುಧೀರ್, ರಾಜು ಮೂಜಾರಿ, ಗಿತಾ ವಾಗ್ಲೆ, ಹರೀಶ್ ಕಿಣಿ, ದೇವಿಪ್ರರಸಾಸ್ ಶೆಟ್ಟಿ, ವೆರನಿಕಾ ಕರ್ನೆಲಿಯೋ, ಬಂಗೇರ, , ಜಿತೇಂದ್ರ ಪುರ್ಟಾಡೋ, ವೈ. ಸಕುಮಾರ್, ವಸಂತ ವಬೆರ್ನಾಡ್, ಯು.ಸಿ. ಶೇಖಬ್ಬ, ದಿನೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ರಮೀಝ್ ಹುಸೈನ್, ಗಣೇಶ್ ಕೋಟ್ಯಾನ್, ಸುಧೀರ್ ಕರ್ಕೇರ, ಸರಸು, ಸನಾ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News