ಮನೆ, ಭಜನಾ ಮಂದಿರ ಸಂಸ್ಕಾರ ಕೊಡುವ ಪ್ರಮುಖ ಕೇಂದ್ರಗಳು: ಗಿರೀಶ್ ಕುಮಾರ್

Update: 2021-02-22 11:58 GMT

ಉಪ್ಪಿನಂಗಡಿ: ಜಗತ್ತು ಇಂದು ಆಧ್ಯಾತ್ಮದ ಕಡೆ ವಾಲುತ್ತಿದ್ದರೆ, ಭಾರತೀಯರಾದ ನಾವು ಪಾಶ್ಚಾತ್ಯ ಸಂಸ್ಕೃತಿಯ ಕಡೆ ವಾಲುತ್ತಿದ್ದೇವೆ. ಮನುಷ್ಯರಿಗೆ ಸಂಸ್ಕಾರ ಕೊಡುವ ಪ್ರಮುಖ ಕೇಂದ್ರಗಳೆಂದರೆ ಮನೆ ಹಾಗೂ ಭಜನಾ ಮಂದಿರಗಳು. ಆದ್ದರಿಂದ ಭಜನಾ ಮಂದಿರಗಳಲ್ಲಿ ನಿತ್ಯ ಭಜನೆ ನಡೆದು ಸಂಸ್ಕಾರ ನೀಡುವ ಕಾರ್ಯವಾಗಬೇಕು ಎಂದು ಜಾಲ್ಸೂರು ವಿನೋಬಾನಗರದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಎ. ತಿಳಿಸಿದರು.

ಇಲ್ಲಿನ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆದ ೪೪ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಜನಾ ಮಂದಿರದ ಗೌರವ ಸಲಹೆಗಾರ ಶಂಕರನಾರಾಯಣ ಭಟ್, ೪೬ ವರ್ಷಗಳಿಂದ ಇಲ್ಲಿ ಭಜನಾ ಮಂದಿರ ಇದ್ದು, ಭಜನೆಯ ಮೂಲಕ ದೇವಿಯ ಆರಾಧನೆ ನಡೆಸಲಾಗುತ್ತದೆ. ಮನುಷ್ಯನ ಮನಸ್ಸಿನ ಕಲ್ಮಶ ಹೋಗಲಾಡಿಸಲು ಭಜನೆ ಪೂರಕ ಎಂದರು.

ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ಅವರ ಅಧ್ಯಕ್ಷತೆ ನಡೆದ ಕಾರ್ಯಕ್ರಮದಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಕೆ. ಪುಷ್ಪವಲ್ಲಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಭಜನಾ ಮಂದಿರದ ಕಾರ್ಯದರ್ಶಿ ಅವನೀಶ್ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಪ್ರಮುಖರಾದ ಯಕ್ಷಸಂಗಮದ ರವೀಶ್ ಭಟ್ ಎಚ್.ಟಿ., ಹರಿಪ್ರಸಾದ್ ಭಟ್, ರಾಧಾಕೃಷ್ಣ ಭಟ್ ಬೊಳ್ಳಾವು, ಪ್ರತಾಪ್ ಪೆರಿಯಡ್ಕ, ಆದರ್ಶ ಕಜೆಕ್ಕಾರ್, ಜಗದೀಶ್ ರಾವ್ ಮಣಿಕ್ಕಳ, ಜತ್ತಪ್ಪ ನಾಯ್ಕ ಬೊಳ್ಳಾವು, ಚಿದಾನಂದ ಪಂಚೇರು, ಲಕ್ಷ್ಮಣ ಗೌಡ ನೆಡ್ಚಿಲ್, ಗಣೇಶ್ ಕಿಂಡೋವು, ಮಹಾಲಿಂಗೇಶ್ವರ ಭಟ್, ಸುರೇಶ್ ಅತ್ರೆಮಜಲು, ದುರ್ಗಾಮಣಿ, ಹರೀಶ್ ಪಟ್ಲ, ಸದಾನಂದ ಶೆಟ್ಟಿ, ಶೀನಪ್ಪ ಗೌಡ, ಜತ್ತಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ಗಣೇಶ್ ಕಿಂಡೋವು, ಗಣೇಶ್ ಆಚಾರ್ಯ, ರವಿಚಂದ್ರ, ದಿವಾಕರ್, ಹೃತಿಕ್‌ರಾಜ್, ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು. 

ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆಯಾಗಿ ಉಪ್ಪಿನಂಗಡಿಯ `ಯಕ್ಷಸಂಗಮ'ದ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ `ಕೃಷ್ಣ ಲೀಲೆ- ಕಂಸವಧೆ' ಯಕ್ಷಗಾನ ಬಯಲಾಟ ನಡೆಯಿತು. ಇದಕ್ಕೂ ಮೊದಲು ಮುಕುಂದ ಭಟ್ ಪೆರ್ಲ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಜೀವನ್ ಪ್ರಾರ್ಥಿಸಿದರು. ಶೈಲಜಾ ಸ್ವಾಗತಿಸಿದರು. ಚೇತನ್ ಮೊಗ್ರಾಲ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News