ಫೆ.23-25: ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸನದುದಾನ ಮಹಾಸಮ್ಮೇಳನ

Update: 2021-02-22 12:27 GMT

ಮಂಗಳೂರು, ಫೆ.22: ಬಂಟ್ವಾಳ ತಾಲೂಕಿನ ಕಡೆಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನಲ್ಲಿರುವ ಮತ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ ‘ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ’ಯ ಪ್ರಥಮ ಸನದುದಾನ ಮಹಾಸಮ್ಮೇಳನ ಫೆ.23ರಿಂದ 25ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಇಝಾ ಫೋರಂನ ಪ್ರತಿನಿಧಿ ಯಾಸಿರ್ ಫಾಝಿಲ್ ಪುತ್ತೂರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, 25ರಂದು ಸಂಜೆ ನಡೆಯಲಿರುವ ಪ್ರಥಮ ಸನದುದಾನ ಮಹಾ ಸಮ್ಮೇಳನದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರು ಭಾಗವಹಿಸಲಿದ್ದಾರೆ.

ಸಮಾವೇಶದಲ್ಲಿ ಸಂಸ್ಥೆಯಲ್ಲಿ ವ್ಯಾಸಂಗ ಪೂರ್ಣಗೊಳಿಸಿದ 11 ಯುವ ವಿದ್ವಾಂಸರಿಗೆ ಸುಲ್ತಾನಿ ಹಾಗೂ ಸುನ್ನಿ ಆದರ್ಶ ತತ್ವ ಸಂಹಿತೆಯಲ್ಲಿ ವಿಶೇಷ ಅಧ್ಯಯನ ಪೂರ್ಣಗೊಳಿಸಿದ 30 ವಿದ್ವಾಂಸರಿಗೆ ‘ಅಲ್ -ಫುರ್ಖಾನಿ’ ಬಿರುದನ್ನು ಎ.ಪಿ.ಉಸ್ತಾದರು ನೀಡಲಿದ್ದಾರೆ ಎಂದು ಅವರು ಹೇಳಿದರು.

ಫೆ. 23ರಂದು ರಾತ್ರಿ 7 ಗಂಟೆಗೆ ದಫ್ ರಾತೀಬ್ ಹಾಗೂ 9 ಗಂಟೆಗೆ ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ರಾತಿಬತುಲ್ ಜಲಾಲಿಯ್ಯ ಮಜ್ಲಿಸ್ ನಡೆಯಲಿದೆ. 24ರಂದು ಸಂಜೆ 4 ಗಂಟೆಗೆ ಕೌಟುಂಬಿಕ ಸಮ್ಮಿಲನ ಹಾಗೂ 7 ಗಂಟೆಗೆ ಸೌಹಾರ್ದ ಸಂಗಮ ಹಾಗೂ ರಾತ್ರಿ 8 ಗಂಟೆಗೆ ಸಯ್ಯಿದ್ ತ್ವಾಹ ತಂಙಳ್ ಪುಕೊಟೂರು ಮತ್ತು ಶಾಹಿನ್ ಬಾಬು ತಂಡದಿಂದ ಬುರ್ದಾ ಆಲಾಪನೆ ನಡೆಯಲಿದೆ. ಫೆ. 25ರಂದು ಬೆಳಗ್ಗೆ 10 ಗಂಟೆಗೆ ಮುತಅಲ್ಲಿಂ ಸಂಗಮ ಮತ್ತು 11.30ಕ್ಕೆ ನವ ಪುರ್ಖಾನಿ ವಿದ್ವಾಂಸರಿಂದ ಆದರ್ಶ ಮುಖಾಮುಖಿ ಕಾರ್ಯಕ್ರಮ ಹಾಗೂ ಮಧ್ಯಾಹ್ನ 2 ಗಂಟೆಗೆ ಗಲ್ಫ್ ಮೀಟ್ ಮತ್ತು ಪದವಿ ವಸ್ತ್ರ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುನೀರ್ ಸಖಾಫಿ ಸಾಲೆತ್ತೂರು, ಹಸನ್ ಜಾಬಿರ್ ಫಾಲಿಳಿ ಉಳ್ಳಾಲ, ಹಸನ್ ಝುಹ್ರಿ ಮಂಗಳಪೇಟೆ, ಮಹ್‌ರೂಫ್ ಸುಲ್ತಾನಿ ಆತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News