×
Ad

ಫೆ.24: ಬೆಲೆ ಏರಿಕೆ ವಿರುದ್ಧ ದ.ಕ ಜೆಡಿಎಸ್ ಪ್ರತಿಭಟನೆ

Update: 2021-02-22 18:16 IST

ಮಂಗಳೂರು, ಫೆ.22:ರಾಜ್ಯದಲ್ಲಿ ಬೆಲೆ ಏರಿಕೆ ನಿರಂತರವಾಗಿರುವ ಹಿನ್ನೆಲೆಯಲ್ಲಿ ಸರಕಾರ ಯಾವುದೇ ಕ್ರಮ ಕೈ ಗೊಳ್ಳದಿರುವುದರಿಂದ ಜಾತ್ಯತೀತ ಜನತಾ ದಳ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದು, ಫೆ.24ರಂದು ಮಂಗಳೂರು ಮಿನಿ  ವಿಧಾನ ಸೌಧದ ಎದುರು ಬೆಳಗ್ಗೆ 10.30ಕ್ಕೆ ದ.ಕ ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಹಮ್ಮದ್ ಕುಂಞಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ದಿನ ಏರುತ್ತಿರುವುದರಿಂದ ಜನಸಾಮಾನ್ಯರ ದಿನ ಬಳಕೆಯ ಎಲ್ಲಾ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಇದನ್ನು ನಿಯಂತ್ರಿಸಲು ಸರಕಾರದ ವತಿಯಿಂದ ಯಾವವುದೇ ಕ್ರಮಗಳು ಆಗುತ್ತಿಲ್ಲ.ಆಡಳಿತ ಪಕ್ಷ ವಿರೋಧ ಪಕ್ಷಗಳನ್ನು ದೂರುತ್ತಿರುವುದರಲ್ಲಿಯೇ ಕಾಲಹರಣ ಮಾಡುತ್ತಿದೆ ಜನರ ನೆರವಿಗೆ ಬರುತ್ತಿಲ್ಲ. ಸರಕಾರದ ಧೋರಣೆಯನ್ನು ವಿರೋಧಿಸಿ ಜೆಡಿಎಸ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ ಜೆಡಿಎಸ್ ಕಾರ್ಯಧ್ಯಕ್ಷ ವಸಂತ ಪೂಜಾರಿ,ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಪಿ.ಹಮ್ಮಬ್ಬ, ಪದಾಧಿಕಾರಿಗಳಾದ ರತ್ನಾಕರ ಸುವರ್ಣ, ಪುಷ್ಪರಾಜ್, ಪ್ರವೀಣ್ ಚಂದ್ರ ಜೈನ್, ಮುನೀರ್ ಮುಕ್ಕಚ್ಚೇರಿ, ರಕ್ಷಿತ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News