ಮಂಗಳೂರು: ಖಾಸಗಿ ಬಸ್‌ಗೆ ಜಿಪಿಎಸ್ ಕಡ್ಡಾಯ

Update: 2021-02-22 16:03 GMT

ಮಂಗಳೂರು, ಫೆ.22: ಎಲ್ಲ ಖಾಸಗಿ ಬಸ್‌ಗಳಲ್ಲಿ ಜಿಪಿಎಸ್‌ನ್ನು ಸಕ್ರಿಯವಾಗಿ ಅಳವಡಿಸಬೇಕು. ಇದು ಕಡ್ಡಾಯವಾಗಿದೆ. ಜಿಪಿಎಸ್ ಅಳವಡಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಆದೇಶಿಸಿದ್ದಾರೆ.

ನಗರ ಮತ್ತು ಗ್ರಾಮಾಂತರ ಬಸ್‌ಗಳಲ್ಲಿ ಜ್ಯೋತಿ ವೃತ್ತದ ಬದಲಾಗಿ ಅಂಬೇಡ್ಕರ್ ವೃತ್ತವೆಂದು ಶಾಶ್ವತವಾಗಿ ನಮೂದಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News