ಸಜಿಪನಡು: ರಿಯಾಳುಲ್ ಇಸ್ಲಾಂ ದಫ್ ಕಮಿಟಿ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2021-02-22 18:18 GMT

ಬಂಟ್ವಾಳ, ಫೆ.22: ಸಜಿಪನಡು ಕೇಂದ್ರ ಜಮಾಅತ್ ಅಧೀನಕ್ಕೊಳಪಟ್ಟ ರಿಯಾಳುಲ್ಲ್ ಇಸ್ಲಾಂ ದಫ್ ಕಮಿಟಿ ಸಜಿಪನಡು ಇದರ ಮಹಾಸಭೆಯು ದಫ್ ಕಟ್ಟಡದ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ಅಬ್ದುರ್ರಝಾಕ್ ದಫ್ ಉಸ್ತಾದ್, ಅಧ್ಯಕ್ಷರಾಗಿ ಚೇರ್ ಮೆನ್ ಮುಹಮ್ಮದ್ ಹನೀಫ್ ಅವರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಅಹ್ಮದ್ ಬಾವ ಬೈಲಗುತ್ತು, ಶರೀಫ್ ಕೋಣಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಜಸೀಮ್, ಜೊತೆ ಕಾರ್ಯದರ್ಶಿಗಳಾಗಿ ನಝೀರ್, ನೌಫಲ್ ಹಾಗೂ ಮುನೀರ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ (ಖಾದರಿಚ್ಚ) ಬೊಳಮೆ ಮತ್ತು ಸಂಚಾಲಕರಾಗಿ ಯೂಸುಫ್ ರಿಕ್ಷಾ ಹಾಗೂ ಇತರ 10 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News