ಮಂಗಳೂರು: ಎಟಿಎಂ ಹ್ಯಾಕ್ ಗೆ ಯತ್ನಿಸುತ್ತಿದ್ದ ಆರೋಪ: ಇಬ್ಬರು ಪೊಲೀಸ್ ವಶಕ್ಕೆ

Update: 2021-02-23 05:32 GMT

ಮಂಗಳೂರು, ಫೆ.23: ಎಟಿಎಂನಲ್ಲಿ ಉಪಕರಣಗಳನ್ನಿಟ್ಟು ಹ್ಯಾಕ್ ಮಾಡಿ ಹಣ ಎಗರಿಸಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿರುವ ಘಟನೆ ನಗರದ ಮಂಗಳಾದೇವಿಯಲ್ಲಿ ರವಿವಾರ ನಡೆದಿದೆ.

ಎಟಿಎಂನಲ್ಲಿ ಇಬ್ಬರು ಉಪಕರಣವಿಡುತ್ತಿರುವ ಬಗ್ಗೆ ಸಂಶಯಗೊಂಡ ಸ್ಥಳೀಯರು ಅವರನ್ನು ಓಡಿಸಿ ಸೆರೆ ಹಿಡಿದಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News