"ರೈತರಿಗೆ ತಪ್ಪು ಮಾಹಿತಿ ನೀಡಿ ಮರುಳುಗೊಳಿಸುವುದು ಹೇಗೆ?": ನಾಯಕರಿಂದ ಸಲಹೆ ಕೇಳುತ್ತಿರುವ ಬಿಜೆಪಿ ಕಾರ್ಯಕರ್ತರು

Update: 2021-02-23 08:57 GMT

ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ಹಾಗೂ ಅವುಗಳ ವಾಪಸಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಸರಕಾರದ ಯಾವುದೇ ಭರವಸೆಗಳನ್ನು ಇಲ್ಲಿಯ ತನಕ ನಂಬದೇ ಇರುವುದರಿಂದ ರೈತರನ್ನು ದಾರಿ ತಪ್ಪಿಸಲು ಬಿಜೆಪಿಯು ವಿವಿಧ ವಿಧಾನಗಳನ್ನು ಹುಡುಕುತ್ತಿದೆ ಎಂದು ಕಾಂಗ್ರೆಸ್  ಆರೋಪಿಸಿದೆ.

ಈ ಆರೋಪ ಮಾಡಿರುವ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವಿಟ್ಟರ್ ನಲ್ಲಿ ಸಣ್ಣ ವೀಡಿಯೋ ಕ್ಲಿಪ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ರೈತರನ್ನು ಹೇಗೆ ಮರುಳುಗೊಳಿಸಬಹುದು ಎಂಬ ಕುರಿತಾದ ಸಲಹೆಗಳನ್ನು ಕೇಳುತ್ತಿರುವುದು  ಕೇಳಿಸುತ್ತದೆ.

"ರೈತರು ನಮ್ಮ ಮಾತುಗಳನ್ನು ಕೇಳುವ ಮನಸ್ಥಿತಿಯಲ್ಲಿಲ್ಲ. ಅವರನ್ನು ತಪ್ಪು ದಾರಿಗೆಳೆಯಬೇಕಿದೆ. ಇದಕ್ಕಾಗಿ ಕೆಲ ಸಲಹೆಗಳನ್ನು ನೀಡಿ?" ಎಂದು ಆತ ಹೇಳುತ್ತಿರುವುದು ಕೇಳಿಸುತ್ತದೆ.

ಗುರುಗ್ರಾಮದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಅಪೀಲು ಮಾಡಲಾಗಿತ್ತೆನ್ನಲಾಗಿದ್ದು ಈ ಕಾರ್ಯಕ್ರಮದಲ್ಲಿ ಹರಿಯಾಣ ಬಿಜೆಪಿ ಅಧ್ಯಕ್ಷ ಓ.ಪಿ ಧನ್ಕರ್, ಕ್ರೀಡಾ ಸಚಿವ ಸಂದೀಪ್ ಸಿಂಗ್ ಹಾಗೂ ಹಿಸಾರ್ ಸಂಸದ ಬೃಜೇಂದ್ರ ಸಿಂಗ್ ಸಹಿತ ಹಲವು ಹಿರಿಯ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

"ಬಿಜೆಪಿ ಕಾರ್ಯಕರ್ತರು ಪಕ್ಷ ನಾಯಕರು ಹಾಗೂ ಸಚಿವರುಗಳನ್ನು ಭೇಟಿಯಾಗುತ್ತಿದ್ದಾರೆ ಹಾಗೂ ರೈತರನ್ನು ಮೂರ್ಖರನ್ನಾಗಿಸಲು ಸಲಹೆ ಕೇಳುತ್ತಿದ್ದಾರೆ. ರೈತರು ನಮ್ಮ ಮಾತುಗಳನ್ನು ಕೇಳುತ್ತಿಲ್ಲ ಅವರನ್ನು ಮರುಳುಗೊಳಿಸಬೇಕಿದೆ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದು ರೈತರಿಗೆ ಬಿಜೆಪಿ ತೋರಿಸದ ತನ್ನ ನಿಜವಾದ ಮುಖ" ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News