ಮನುಷ್ಯರ ನಡುವೆ ಸೇತುವೆ ಕಟ್ಟೋಣ: ನಿಕೇತ್ ರಾಜ್ ಮೌರ್ಯ

Update: 2021-02-23 09:23 GMT

ಕಾಪು, ಫೆ.23: ಮನುಷ್ಯ ಮನುಷ್ಯನ ನಡುವೆ ಗೋಡೆ ಕಟ್ಟುವುದಲ್ಲ ಸೇತುವೆ ಕಟ್ಟಬೇಕಾಗಿದೆ. ಈ ಮೂಲಕ ಸುಂದರ ಭಾರತ ನಿರ್ಮಾಣ ಮಾಡೋಣ ಎಂದು ಕೆಪಿಸಿಸಿ ಬೆಂಗಳೂರಿನ ಪ್ಯಾನಲಿಸ್ಟ್ ನಿಕೇತ್ ರಾಜ್ ಮೌರ್ಯ ಹೇಳಿದ್ದಾರೆ.

   ಅವರು ಮಂಗಳವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾಪು ಪೇಟೆಯಲ್ಲಿ ಆಯೋಜಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಯ ವಿರುದ್ದದ ’ಜನದ್ವನಿ’ ಪಾದಯಾತ್ರೆಯ ಅಂಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಎಲ್ಲೋ ಕೂತು ಪೋನ್ ಕರೆ ಮೂಲಕ ಮಾಡೋದು ಹೋರಾಟ ಅಲ್ಲ. ಜನಗಳ ನಡುವೆ ನಿಂತು ಮಾಡೋದು ನಿಜವಾದ ಹೊರಾಟ. ಜನಧ್ವನಿ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ. ರೈತರಿಗೆ ಮಾತ್ರ ಅನ್ಯಾಯ ಆಗಿಲ್ಲ, ಯುವಕರಿಗೂ ಅನ್ಯಾಯವಾಗಿದೆ. ಬೆಲೆ ಏರಿಕೆಯನ್ನ ಸಮರ್ಥಿಸಿ ಬೆಜೆಪಿಗೆ ಬೆಂಬಲ ನೀಡುತ್ತಿದ್ದವರ ಬಾಯಿ ಈಗ ಬಂದಾಗಿದೆ ಎಂದರು.

 ಪಂಪ್ ಸೆಟ್ ಉಚಿತ ವಿದ್ಯುತ್ ಸಂಪರ್ಕವನ್ನ ಕಡಿತ ಮಾಡಿ ಖಾಸಗೀಕರಣ ಮಾಡಲಾಗುತ್ತಿದೆ. ಈ ವರ್ಷದ ಒಳಗೆ ಪಶ್ಚಿಮ ಬಂಗಾಳದ ಚುನಾವಣೆ ಆದ ನಂತರ ವಿದ್ಯುತ್ ಕಂಪೆನಿಯನ್ನು ಸರಕಾರ ಖಾಸಗೀಕರಣ ಮಾಡುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನವೀನ್ ಎನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News