ಮಣಿಪಾಲ : ವಸ್ತ್ರ ವಿನ್ಯಾಸ ತರಬೇತಿ ಉದ್ಘಾಟನೆ

Update: 2021-02-23 12:03 GMT

ಉಡುಪಿ, ಫೆ. 23: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ 4 ವಾರಗಳ ವಸ್ತ್ರ ವಿನ್ಯಾಸ ತರಬೇತಿಯು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ರೋಟರಿ ಕ್ಲಬ್ ರೆನ್-4 ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಆರಂಭಗೊಂಡಿದೆ.

ತರಬೇತಿ ಕಾರ್ಯಕ್ರಮವನ್ನು ಮಣಿಪಾಲದ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ಹಿರಿಯ ವ್ಯವಸ್ಥಾಪಕಿ ಪ್ರಭಾ ಎಚ್.ಎಸ್ ಉದ್ಘಾಟಿಸಿ ಪ್ರತಿ ಯೊಬ್ಬ ಮಹಿಳೆಯು ಸ್ವಾವಲಂಬಿಯಾಗಲು ಈ ರೀತಿಯ ತರಬೇತಿಗಳು ಬಹಳ ಸಹಕಾರಿ. ಮಹಿಳೆಯರಿಗೆ ಸ್ವಂತ ಉದ್ಯೋಗ ನಡೆಸಲು ಇಂದು ಬ್ಯಾಂಕ್‌ಗಳು ಅನೇಕ ಸೌಲ್ಯಗಳನ್ನು ನೀಡುತ್ತಿವೆ. ಇಂತಹ ಸೌಲ್ಯಗಳನ್ನು ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ರೋಟರಿ ಕ್ಲಬ್‌ನ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಹಾಗೂ ಕಾರ್ಯದರ್ಶಿ ದೀಪಾ ಭಂಡಾರಿ ಅವರು ಶಿಬಿರಾರ್ಥಿಗಳಿಗೆ ಕೌಶಲ್ಯಭಿವೃದ್ಧಿಯ ಮಹತ್ವದ ಬಗ್ಗೆ ತಿಳಿಸಿ, ಇದರಿಂದ ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಹೇಳಿದರು.

ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ, ಸಂಪನ್ಮೂಲ ವ್ಯಕ್ತಿ ರಮ್ಯ ಎ.ಸಿ. ಉಪಸ್ಥಿತರಿದ್ದರು. ಟ್ರಸ್ಟಿನ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿದರು. ಬಿವಿಟಿಯ ಮಾನವ ಸಂಪನ್ನೂಲ ಅಧಿಕಾರಿ ಗೀತಾ ಆರ್ ರಾವ್ ವಂದಿಸಿದರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News