ಕಡೆಂಗೋಡ್ಲು ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

Update: 2021-02-23 13:33 GMT

ಉಡುಪಿ, ಫೆ.23: ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನ ಕಳುಹಿಸಲು ಮಾರ್ಚ್ 15 ಕೊನೆಯ ದಿನವಾಗಿರುತ್ತದೆ. ಕವನ ಸಂಕಲನಗಳನ್ನು ಕಳುಹಿಸ ಬೇಕಾದ ವಿಳಾಸ: ಸಂಯೋಜಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ- 576102.

ಕಾವ್ಯ ಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ 10,000 ರೂ.ಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತಿದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ಮೂರು ವಿಮರ್ಶಕರುಳ್ಳ ಒಂದು ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್:  https://govindapairesearch.blogspot.com  ಅಥವಾ ದೂರವಾಣಿ ಸಂಖ್ಯೆ: ಮೊಬೈಲ್ ನಂ. 9448868868/ 9480575783; ಕಛೇರಿ: 0820-2521159 ಸಂಪರ್ಕಿಸಬಹುದು.

ನಿಯಮಗಳು: ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು. ಕವನ ಸಂಕಲನದಲ್ಲಿ ಕನಿಷ್ಠ 40 ಕವನಗಳು ಇರಲೇಬೇಕು. ಆದರೆ ಈ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.

ಲೇಖಕರು ತಮ್ಮ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) 2021 ಮಾರ್ಚ್ 15ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸಬೇಕು. ಮೇ ತಿಂಗಳಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು. ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವನ್ನು ಡೆಮ್ಮಿ 1/8, 1/12 ಅಥವಾ 1/8 ಆಕಾರದಲ್ಲಿ ಮುದ್ರಿಸಬೇಕು. ಒಬ್ಬರು ಒಂದು ಕವನ ಸಂಕಲನವನ್ನು ಮಾತ್ರ ಕಳುಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News