ಕೋಡಿ: ವೃತ್ತಿ ಅಭಿವೃದ್ಧಿ ಕುರಿತ ಕಾರ್ಯಕ್ರಮ

Update: 2021-02-23 14:30 GMT

ಕುಂದಾಪುರ, ಫೆ.23: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಭಾಗದ ಮಾಹಿತಿ ತಂತ್ರಜ್ಞಾನ ಘಟಕದ ವತಿಯಿಂದ ವೃತ್ತಿ ಅಭಿವೃದ್ಧಿಯ ಕುರಿತ ಕಾರ್ಯಕ್ರಮವನ್ನು ಫೆ.20ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಉಡುಪಿ ರೋಬೋಸಾಫ್ಟ್ ಕಂಪೆನಿಯ ಶ್ರೀಕಾಂತ್ ಭಂಡಾರಿ, ಐಟಿ ಕ್ಷೇತ್ರದಲ್ಲಿ ವೃತ್ತಿ ಆಯ್ಕೆಯ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಅಬ್ಬುಲ್ ರೆಹಮಾನ್, ವಿಭಾಗದ ಹಿರಿಯ ಉಪ ನ್ಯಾಸಕಿ ನೂತನ್ ಉಪಸ್ಥಿತರಿದ್ದರು.

ಘಟಕದ ಸಂಯೋಜಕಿ ಹರ್ಷಿತ ಜಿ.ಪಿ. ಸ್ವಾಗತಿಸಿದರು. ವಿದ್ಯಾರ್ಥಿ ನವನೀತ್ ವಂದಿಸಿದರು. ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಅಲ್-ತಸ್ಮೀಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿ ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News