ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ: ಡಾ.ಪದ್ಮನಾಭ ಭಟ್

Update: 2021-02-23 14:50 GMT

ಶಿರ್ವ, ಫೆ.23: ಭಾರತೀಯ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ವಾಗಿದೆ. ನಮ್ಮ ಸಂವಿಧಾನ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಎಂಬ ನಾಲ್ಕು ಮೂಲಭೂತ ಪರಿಕಲ್ಪನೆಗಳ ಮೇಲೆ ರೂಪಿತವಾಗಿದೆ ಎಂದು ವಿಶ್ರಾಂತ ಸಹಪ್ರಾಧ್ಯಾಕ ಡಾ.ಪದ್ಮನಾಭ ಭಟ್ ತಿಳಿಸಿದ್ದಾರೆ.

ಮುಲ್ಕಿ ಸುಂದರ್ ರಾವ್ ಶೆಟ್ಟಿ ಕಾಲೇಜಿನ ಮಾನವಿಕ ವಿಭಾಗದ ಆಶ್ರಯ ದಲ್ಲಿ ಅವರು ಭಾರತೀಯ ಸಂವಿಧಾನದ ಪ್ರಾಮುಖ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಯನ ಎಂ. ಮಾತನಾಡಿ, ಭಾರತೀಯ ಸಂವಿಧಾನವು ಧ್ವನಿಯಿಲ್ಲದ ಕೋಟ್ಯಾಂತರ ಜನರಿಗೆ ಧ್ವನಿಯಾಗಿದೆ ಎಂದು ತಿಳಿಸಿದರು. ಮಾನವಿಕ ಸಂಘದ ಅಧ್ಯಾಪಕ ಸಲಹೆಗಾರ ಪ್ರೊ.ಪ್ರಶಾಂತಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವೈಶಾಖ್ ವಂದಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News