ಅಕ್ರಮ ಕಟ್ಟಡದ ಪ್ರಮಾಣಪತ್ರ, ವ್ಯಾಪಾರ ಪರವಾನಿಗೆ ರದ್ಧತಿಗೆ ಆಗ್ರಹ

Update: 2021-02-23 14:54 GMT

ಉಡುಪಿ, ಫೆ.22: ಉಡುಪಿ ಅಂಬಾಗಿಲು -ಕಲ್ಸಂಕ ರಸ್ತೆಯಲ್ಲಿರುವ ಧರಣಿ ಆರ್ಕೆಡ್ ವಾಣಿಜ್ಯ ಕಟ್ಟಡದ ಕಾಮಗಾರಿಯ ಬಗ್ಗೆ ಉಡುಪಿ ನಗರಸಭೆಯ ವಿರುದ್ದ ಕಟ್ಟಡದ ಮಾಲಕರು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು, ವ್ಯಾಜ್ಯ ಇನ್ನೂ ಬಾಕಿ ಇರುವಾಗಲೇ ಕಟ್ಟಡ ಪೂರ್ತಿಗೊಂಡ ಬಗ್ಗೆ ನೀಡಿರುವ ಪ್ರಮಾಣಪತ್ರ ಹಾಗೂ ವ್ಯಾಪಾರದ ಪರವಾನಿಗೆಯನ್ನು ರದ್ದುಗೊಳಿಸ ಬೇಕು ಎಂದು ಕುಂಜಿಬೆಟ್ಟು ನಿವಾಸಿ ಮುಹಮ್ಮದ್ ಹನೀಫ್ ಆಗ್ರಹಿಸಿದ್ದಾರೆ.

ಸೋಮವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಾವಳಿಗಳನ್ನು ಉಲ್ಲಂಘಿಸಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಎರಡು ಅಂತಸ್ತಿಗೆ ಅನುಮತಿ ಪಡೆದುಕೊಂಡು ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೂ ನಗರಸಭೆಯ ಅಧಿಕಾರಿಗಳು ಈ ಕಟ್ಟಡ ಪೂರ್ತಿ ಗೊಂಡ ಬಗ್ಗೆ ಹಾಗೂ ವ್ಯಾಪಾರ ನಡೆಸಲು ಪರವಾನಿಗೆ ನೀಡಿದ್ದಾರೆ. ಈ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆಂದು ದೂರಿದರು.

ಬಡಜನರಿಗೆ ಅರ್ಧ ಅಡಿಯಷ್ಟು ಜಾಗದಲ್ಲಿ ವ್ಯತ್ಯಾಸವಾದರೂ ನಗರಸಭೆ ಅಧಿಕಾರಿಗಳು ತೊಂದರೆ ನೀಡುತ್ತಾರೆ. ಆದರೆ ಈ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಮೀಸಲಿಟ್ಟ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದರೂ ಯಾವುದೇ ಕ್ರಮ ಜರಗಿಸುತ್ತಿಲ್ಲ. ನಗರಸಭೆಯಿಂದ ರಚಿಸಿದ ಫುಟ್‌ಪಾತನ್ನು ಒಡೆದು ಹಾಕಿ ವಾಹನ ನಿಲುಗಡೆಗೆ ಬಳಸಲಾಗುತ್ತಿದೆ. ವಾಹನಗಳನ್ನು ರಸ್ತೆಯ ಲ್ಲಿಯೇ ಪಾರ್ಕಿಂಗ್ ಮಾಡುತ್ತಿದ್ದರೂ ಮೌನ ವಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News