ಬ್ರಿಟನ್: ಮೇ 17ಕ್ಕಿಂತ ಮೊದಲು ಅಂತರ್‌ರಾಷ್ಟ್ರೀಯ ಪ್ರಯಾಣವಿಲ್ಲ

Update: 2021-02-23 16:42 GMT

ಲಂಡನ್, ಫೆ. 23: ಇಂಗ್ಲೆಂಡ್‌ನಿಂದ ಹೊರಹೋಗುವ ಹಾಗೂ ಒಳಬರುವ ಅನಗತ್ಯ ಅಂತರ್‌ರಾಷ್ಟ್ರೀಯ ಪ್ರಯಾಣದ ಮೇಲಿನ ನಿಷೇಧವು ಕನಿಷ್ಠ ಮೇ 17ರವರೆಗೆ ಮುಂದುವರಿಯಲಿದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ.

ಆದರೆ, ಬೇಸಿಗೆಯಲ್ಲಿ ಪ್ರವಾಸ ಹೋಗಲು ಬಯಸುವವರಿಗೆ ಪ್ರವಾಸವನ್ನು ರೂಪಿಸಲು ಸಹಾಯವಾಗುವಂತೆ ಎಪ್ರಿಲ್ 12ರಂದು ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು.

‘‘ಅಂತರ್‌ರಾಷ್ಟ್ರೀಯ ಪ್ರಯಾಣ ಯಾವಾಗ ಪುನರಾರಂಭಗೊಳ್ಳಬೇಕು ಎಂಬ ಬಗ್ಗೆ ಸರಕಾರ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ. ಆದರೆ, ಅದು ಮೇ 17ಕ್ಕಿಂತ ಮೊದಲು ಇರುವುದಿಲ್ಲ’’ ಎಂದು ಬೊರಿಸ್ ಜಾನ್ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News