ತನ್ನ ಚಿತ್ರ ಬಿಡಿಸಿದ ದುಬೈ ಬಾಲಕನಿಗೆ ಮೋದಿ ಪ್ರಶಂಸಾ ಪತ್ರ

Update: 2021-02-23 17:16 GMT

ದುಬೈ (ಯುಎಇ), ಫೆ. 23: ತನ್ನ ಚಿತ್ರ ಬಿಡಿಸಿದ ಯುಎಇಯಲ್ಲಿರುವ 14 ವರ್ಷದ ಭಾರತೀಯ ಬಾಲಕನೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಾ ಪತ್ರವೊಂದನ್ನು ಕಳುಹಿಸಿದ್ದಾರೆ.

ದುಬೈಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿರುವ, ಕೇರಳದ ಸರಣ್ ಸಸಿಕುಮಾರ್ ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಮೋದಿಯ ‘ಪೆನ್ಸಿಲ್’ ಚಿತ್ರವೊಂದನ್ನು ಬಿಡಿಸಿದ್ದರು. ಅದನ್ನು ಜನವರಿಯಲ್ಲಿ ಯುಎಇಗೆ ಭೇಟಿ ನೀಡಿದ್ದ ವಿದೇಶ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ವಿ. ಮುರಳೀಧರನ್ ಮೂಲಕ ಪ್ರಧಾನಿ ಮೋದಿಗೆ ಕಳುಹಿಸಿದ್ದರು.

ಪ್ರಧಾನಿಯ ಪ್ರಶಂಸಾ ಪತ್ರವನ್ನು ನೋಡಿ ಬಾಲಕ ಖುಷಿಯಾಗಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News