ಫೆ. 26 : ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ, ವೃತ್ತಿ ಮಾರ್ಗದರ್ಶನ ಕಾರ್ಯಗಾರ

Update: 2021-02-23 17:36 GMT

ಅಬುಧಾಬಿ  : 'ಹೆಮ್ಮೆಯ ಯುಎಇ ಕನ್ನಡಿಗರು' ತಂಡ ಆನ್ ಲೈನ್ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ ಫೆ.26ರಂದು ಸಂಜೆ 5 ಗಂಟೆಗೆ ಆಯೋಜಿಸಿಕೊಂಡಿದ್ದಾರೆ.

ಅನಿವಾಸಿ ಕನ್ನಡಿಗರಿಗಾಗಿ ಇಂಟರ್ವ್ಯೂ ಅಟೆಂಡ್ ಮಾಡುವ ಬಗ್ಗೆ ಮಾಹಿತಿ, ಯಾವ ರೀತಿಯಲ್ಲಿ ಯಾವ ಯಾವ ಸ್ಥಳಗಳಲ್ಲಿ ಕೆಲಸ ಹುಡುಕಬೇಕು, ಸಿ ವಿ ಹೇಗೆ ಇರಬೇಕು ಮುಂತಾದುವುಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಲು ನುರಿತ ತಜ್ಞ ಮಾರ್ಗದರ್ಶಕರಿಂದ ಗೈಡೆನ್ಸ್ ಕ್ಲಾಸ್ ಮತ್ತು ಕೆಲಸ ಹುಡುಕುತ್ತಿರುವ ಕನ್ನಡಿಗರನ್ನು ಕೆಲವು ಕಂಪನಿಗಳ ಮುಖ್ಯಸ್ಥರು ಬಂದು ಕೆಲಸಕ್ಕೆ ನೇಮಕಾತಿ  ಪ್ರಕ್ರಿಯೆಯ ಉದ್ಯೋಗ ಮೇಳ ಮುಂತಾದ ವಿಷಯಗಳಿಗೆ ಉಚಿತವಾಗಿ ವೇದಿಕೆ ಒದಗಿಸಿದ್ದು ಕೆಲಸ ಹುಡುಕುತ್ತಿರುವ  ಕನ್ನಡಿಗರು ಬಂದು ಸದುಪಯೋಗ ಪಡೆದುಕೊಳ್ಳಬೇಕಾಗಿ ತಂಡದ ಅಧ್ಯಕ್ಷರಾದ ಮಮತಾ ಮೈಸೂರು,  ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ  ಕಾರ್ಯದರ್ಶಿಗಳಾದ ಸೆಂಥಿಲ್ ಬೆಂಗಳೂರು, ಹಾಗು ಪ್ರಧಾನ ಸಂಚಾಲಕರಾದ ರಫೀಕಲಿ ಕೊಡಗು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ  ವೃತ್ತಿ ಮಾರ್ಗದರ್ಶಕರಾಗಿ ಅಲ್ ಐನ್ ಜೂನಿಯರ್ ಸ್ಕೂಲ್ ಪರ್ಸನಾಲಿಟಿ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾದ  ಉಮ್ಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕರಾದ  ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞರಾದ ಗುರು ನಾಡಕರ್ಣಿ ಮತ್ತು ಎಚ್ ಆರ್ ಎಕ್ಸಿಕ್ಯೂಟಿವ್  ರಾಧಾ ಜೀವನ್  ಅವರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಜಾಬ್ ವಿಭಾಗದ ಸಂಚಾಲಕರಾದ  ನವೀನ್ ಅವರು ನೆರವಹಿಸಲಿದ್ದಾರೆ.

ಕಾರ್ಯಕ್ರಮದ ಆಹ್ವಾನಕ್ಕಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಂಡದ  ಪ್ರಮುಖ ಸಮಿತಿ  ಸದಸ್ಯರುಗಳಾದ ಮಮತಾ ಶಾರ್ಜಾ , ಡಾಕ್ಟರ್ ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು , ಹಾದಿಯ ಮಂಡ್ಯ, ಪಲ್ಲವಿ ದಾವಣಗೆರೆ,  ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ,ಅನಿತಾ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News