ಸೌದಿ: ದೀರ್ಘಾವಧಿ ತೈಲ ಸಚಿವ ಅಹ್ಮದ್ ಝಾಕಿ ನಿಧನ

Update: 2021-02-23 18:36 GMT

ರಿಯಾದ್ (ಸೌದಿ ಅರೇಬಿಯ), ಫೆ. 23: ಅತ್ಯಂತ ದೀರ್ಘಾವಧಿಗೆ ಸೌದಿ ಅರೇಬಿಯದ ತೈಲ ಸಚಿವರಾಗಿದ್ದ ಅಹ್ಮದ್ ಝಾಕಿ ಯಮನಿ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಅವರು 1973ರ ತೈಲ ಬಿಕ್ಕಟ್ಟಿನ ವೇಳೆ ಸೌದಿ ಅರೇಬಿಯವನ್ನು ಮುನ್ನಡೆಸಿದ್ದರು ಹಾಗೂ ಸರಕಾರಿ ಇಂಧನ ಕಂಪೆನಿಯ ರಾಷ್ಟ್ರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರು 1962ರಿಂದ 1986ರವರೆಗೆ ಸೌದಿ ಅರೇಬಿಯದ ತೈಲ ಸಚಿವರಾಗಿದ್ದರು.

 ದಕ್ಷಿಣ ಇಟಲಿಯ ಸಿಸಿಲಿಯಲ್ಲಿರುವ ಕೆಟಾನಿಯ ಸಮೀಪದ ಜ್ವಾಲಾಮುಖಿ ಪರ್ವತ ವೌಂಟ್ ಎಟ್ನ ಮಂಗಳವಾರ ಸ್ಫೋಟಿಸಿದ್ದು, ಲಾವಾರಸ ಹರಿಯುತ್ತಿದೆ. ಇದಕ್ಕೂ ಮುನ್ನ ಆಕಾಶದಲ್ಲಿ ಹಲವು ಕಿಲೋಮೀಟರ್‌ಗಳ ಎತ್ತರಕ್ಕೆ ಬೂದಿ ಚಿಮ್ಮಿದೆ.

  ‘ಪರ್ಸವರನ್ಸ್’ ಮಂಗಳ ಗ್ರಹ ಶೋಧಕವು ತನ್ನ ಆರ್ಬಿಟರ್‌ನಿಂದ ನೆಲಸ್ಪರ್ಶಕ್ಕಾಗಿ ಧಾವಿಸುತ್ತಿರುವಾಗ ಅದರ ವೇಗವನ್ನು ಕಡಿಮೆ ಮಾಡುವುದಕ್ಕಾಗಿ ಬೃಹತ್ ಪ್ಯಾರಾಶೂಟೊಂದು ತೆರೆದುಕೊಂಡಿರುವುದು. ಈ ಚಿತ್ರವನ್ನು ನಾಸಾ ಸೋಮವಾರ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News