ದೇಶದ ಇಂಚು ಭೂಮಿ ಕೂಡ ಅದಾನಿ ಅಂಬಾನಿಗೆ ಅಡವು: ಕೆಪಿಸಿಸಿ ವಕ್ತಾರ ನಿಕೇತ್‌ ರಾಜ್ ಮೌರ್ಯ

Update: 2021-02-24 14:29 GMT

ಉಡುಪಿ, ಫೆ.24: ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಸೇಲ್ ಇಂಡಿಯಾ ಬಜೆಟ್ ಮತ್ತು ದೇಶವನ್ನು ಲೂಟಿ ಮಾಡುವ ಬಜೆಟ್ ಆಗಿದೆ. ಇಂದು ದೇಶದ ಇಂಚು ಇಂಚು ಭೂಮಿಯನ್ನು ಅದಾನಿ ಅಂಬಾನಿಗೆ ಅಡವು ಇಡಲು ಸರಕಾರ ಮುಂದಾಗುತ್ತಿದೆ. ಈ ಭೂಮಿಯನ್ನು ಉಳಿಸಲು ರೈತರು ಹೋರಾಟಕ್ಕೆ ಇಳಿದಿದ್ದಾರೆ. ಸ್ವಾತಂತ್ರನಂತರದ ಅತ್ಯಂತ ಬೃಹತ್ ಚಳ ವಳಿ ಈ ರೈತ ಚಳವಳಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್‌ ರಾಜ್ ಮೌರ್ಯ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಕಲ್ಯಾಣಪುರ ಪೇಟೆಯಲ್ಲಿ ನಡೆದ ಮೂರನೇ ದಿನದ ಜನಧ್ವನಿ ಪಾದಯಾತ್ರೆಯ ಸಾರ್ವಜನಿಕ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕೇಂದ್ರ ಸರಕಾರದ ನೀತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಡವರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಕಾಫಿ ಬೆಳೆಗಾರರು ಸಮಸ್ಯೆ ಬಗ್ಗೆ ಇಲ್ಲಿನ ಸಂಸದೆ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ. ರಾಜ್ಯದ 26 ಸಂಸದರಿಗೆ ಪ್ರಧಾನ ಮಂತ್ರಿ ಎದುರು ಮಾತನಾಡುವ ಯಾವುದೇ ಧೈರ್ಯ ಸಾಮಥ್ಯರ್ಗಳಿಲ್ಲ ಎಂದು ಅವರು ಟೀಕಿಸಿದರು.

ಇದು ದೇಶ ಮತ್ತು ಬಡವರ ಉಳಿವಿಗಾಗಿ ನಡೆಯುತ್ತಿರುವ ಪಾದಯಾತ್ರೆ ಯಾಗಿದೆ. ಗಾಂಧಿ, ನಾರಾಯಣಗುರು, ಅಂಬೇಡ್ಕರ್ ಚಿಂತನೆಯನ್ನು ಈ ದೇಶದಲ್ಲಿ ಮರುಸ್ಥಾಪನೆ ಮಾಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾವೇ ನಿಜವಾದ ದೇಶಕ್ತರು ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಎಂ.ಎ.ಗಪೂರ್, ದಿನೇಶ್ ಪುತ್ರನ್, ಕುಶಲ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ನಾಗೇಶ್ ಕುಮಾರ್ ಉದ್ಯಾವರ, ಅಣ್ಣಯ್ಯ ಸೇರಿಗಾರ್, ಬಿ.ನರಸಿಂಹಮೂರ್ತಿ, ಸತೀಶ್ ಅಮೀನ್ ಪಡುಕರೆ, ಜನಾರ್ದನ್ ಭಂಡಾರ್‌ಕಾರ್, ರಮೇಶ್ ಕಾಂಚನ್, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಡಾ.ಸುನೀತ ಶೆಟ್ಟಿ, ಯತೀಶ್ ಕರ್ಕೆರ, ಪ್ರಖ್ಯಾತ ಶೆಟ್ಟಿ, ಸೌರಭ್ ಬಲ್ಲಾಳ್, ದೀಪಕ್ ಕೋಟ್ಯಾನ್, ರೋಶನಿ ಒಲಿವರಾ, ಕೀರ್ತಿ ಶೆಟ್ಟಿ, ಹರೀಶ್ ಶೆಟ್ಟಿ ಪಂಗಾಳ, ಶಬ್ಬೀರ್ ಅಹ್ಮದ್, ಇಸ್ಮಾಯಿಲ್ ಅತ್ರಾಡಿ, ಮುರಲಿ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ದಿನಕರ್ ಹೇರೂರು ಉಪಸ್ಥಿತರಿದ್ದರು.

ಬೆಳಗ್ಗೆ ಉದ್ಯಾವರ ಬಲಾಯಿಪಾದೆಯಿಂದ ಹೊರಟ ಪಾದಯಾತ್ರೆಯು ಅಂಬಲಪಾಡಿ, ಸಂತೆಕಟ್ಟೆ, ಉಪ್ಪೂರು, ಹೇರೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಜೆ ಬ್ರಹ್ಮಾವರ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News