ಫೆ.26ರಿಂದ ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ

Update: 2021-02-24 14:57 GMT

ಕೋಟ, ಫೆ. 24: ಸಾಲಿಗ್ರಾಮದ ಶ್ರೀವೀರಮಾರುತಿ ಜಿಮ್ ಇವರ ಆಶ್ರಯ ದಲ್ಲಿ ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗ ದಲ್ಲಿ ಕರ್ನಾಟಕ ಪವರ್ ಲಿಪ್ಟಿಂಗ್ ಸಂಸ್ಥೆಯ ಮಾನ್ಯತೆಯೊಂದಿಗೆ ರಾಜ್ಯಮಟ್ಟದ 42ನೆ ಪುರುಷರ ಹಾಗೂ 24ನೆ ಮಹಿಳೆಯರ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಮಾಸ್ಟರ್ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಫೆ.26ರಿಂದ 28ರವರೆಗೆ ಸಾಲಿಗ್ರಾಮ ಗುರುನರಸಿಂಹ ಬಯಲು ರಂಗಮಂಟಪದಲ್ಲಿ ಆಯೋಜಿಸಲಾಗಿದೆ.

ಫೆ.23ರಂದು ಸಾಲಿಗ್ರಾಮದ ವೀರಮಾರುತಿ ಜಿಮ್ ವಠಾರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಜಿ.ವಿ.ಅಶೋಕ್, ಫೆ.26ರಂದು ಬೆಳಗ್ಗೆ 9ಗಂಟೆಗೆ ಸ್ಫರ್ಧೆಯನ್ನು ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ ಹಾಲಾಡಿ ಶ್ರೀನಿವಾ್ ಶೆಟ್ಟಿ ವಹಿಸಲಿರುವರು ಎಂದರು.

ಫೆ.28ರಂದು ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿರುವರು. ಈ ಸ್ಪರ್ಧೆ ಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300ರಿಂದ 350 ಸ್ಪರ್ಧಾಳುಗಳು ಮತ್ತು 30 ಜನ ತೀರ್ಪುಗಾರರು ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News