ಕೇರಳದಿಂದ ದಕ ಜಿಲ್ಲೆಗೆ ಪ್ರತಿದಿನ ಬಂದು ಹೋಗುವವರಿಗೆ ಕೋವಿಡ್ ನೆಗಟಿವ್ ವರದಿ ಅಗತ್ಯವಿಲ್ಲ:ಡಿಸಿಎಂ ಅಶ್ವತ್ಥ್ ನಾರಾಯಣ್

Update: 2021-02-24 15:41 GMT

ಮಂಗಳೂರು, ಫೆ.24: ಕೊರೋನ ಸೋಂಕಿನ ಭೀತಿಯಲ್ಲಿ ಕೇರಳದ ಕಡೆಯಿಂದ ಬರುವ ಮಂದಿಗೆ ಗಡಿ ನಿರ್ಬಂಧಿಸುವ ಆದೇಶದಿಂದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಸಡಿಲಿಕೆ ನೀಡಲು ಮುಂದಾಗಿದ್ದಾರೆ.

ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಕಾಸರಗೋಡಿನಿಂದ ಅತಿ ಹೆಚ್ಚು ಮಂದಿ ಮಂಗಳೂರನ್ನು ಆಶ್ರಯಿಸಿದ್ದಾರೆ. ದಿನವೂ ಬಂದು ಹೋಗುವ ಮಂದಿಯನ್ನು ಎಷ್ಟು ಅಂತ ಪರೀಕ್ಷೆಗೆ ಒಳಪಡಿಸಬೇಕು. ದಿನ ಬರುವ ಮಂದಿ ಎಲ್ಲಿಂದ ನೆಗೆಟಿವ್ ರಿಪೋರ್ಟ್ ತರಬೇಕು ಎಂದು ಪ್ರಶ್ನಿಸಿದ್ದಾರೆ.

ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿದಿನ ಬಂದು ಹೋಗುವವರಿಗೆ ಕೋವಿಡ್ ನೆಗಟಿವ್ ವರದಿ ಅಗತ್ಯವಿಲ್ಲ. ಅವರು ‘ಆರೋಗ್ಯ ಸೇತು’ ಆ್ಯಪ್ ಹೊಂದಿರಬೇಕು. ಕೇರಳದಿಂದ ಬಂದ ದ.ಕ.ದಲ್ಲಿ ವಾಸ್ತವ್ಯ ಹೂಡುವವರು ಕೋವಿಡ್ ನೆಗಟಿವ್ ವರದಿ ಹೊಂದಿರಬೇಕು. ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

ಕೇರಳದಿಂದ ಮಂಗಳೂರಿಗೆ ಶಾಲಾ ಕಾಲೇಜು, ಆಸ್ಪತ್ರೆ ವ್ಯವಹಾರ ನಿಮಿತ್ತ ಪ್ರತಿದಿನ ಬಂದು ಹೋಗುವುದು ಅನಿವಾರ್ಯ. ಈಗೆ ಹೋಗುವವರು ಕೊರೋನ ನೆಗಟಿವ್ ವರದಿ ಪಡೆಯಬೇಕೆಂದಿಲ್ಲ. ಆದರೆ ಕೋವಿಡ್ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವೆಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News