ಮೊಟೆರಾ ಸ್ಟೇಡಿಯಂ ಹೆಸರು ಬದಲಾವಣೆ: ಕ್ರೀಡಾ ಸಚಿವ ರಿಜಿಜು ಸಮರ್ಥನೆ

Update: 2021-02-24 16:22 GMT

ಅಹಮದಾಬಾದ್: ನವೀಕರಿಸಲಾಗಿರುವ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರನ್ನು ಇಟ್ಟಿರುವುದಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.

“ಇಡೀ ಕ್ರೀಡಾ ಸಂಕೀರ್ಣದ ಹೆಸರು ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಎನ್ ಕ್ಲೇವ್. ಆ ಕಾಂಪ್ಲೆಕ್ಸ್ ನೊಳಗಿನ ಒಂದು ಕ್ರಿಕೆಟ್ ಕ್ರೀಡಾಂಗಣದ ಹೆಸರನ್ನು ಮಾತ್ರ ನರೇಂದ್ರ ಮೋದಿ ಸ್ಟೇಡಿಯಂ ಎಂದು ಹೆಸರಿಸಲಾಗಿದೆ’’ ಎಂದು ರಿಜಿಜು ಹೇಳಿದ್ದಾರೆ.

ವಿಪರ್ಯಾಸವೆಂದರೆ ಸರ್ದಾರ್ ಪಟೇಲ್ ಅವರ ನಿಧನದ ನಂತರ ಎಂದಿಗೂ ಗೌರವಿಸದ ಪರಿವಾರ ಇಂದು ಅಳಲು ತೋಡಿಕೊಳ್ಳುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಟೀಕೆಯನ್ನು ರಿಜಿಜು ಉಲ್ಲೇಖಿಸಿದರು.

2007ರಲ್ಲಿ ಸೋನಿಯಾ ಗಾಂಧಿ ಅವರು ಅರುಣಾಚಲ ಪ್ರದೇಶಕ್ಕೆ ಬಂದು ಸುಂದರವಾದ ಅರುಣಾಚಲ ವಿಶ್ವವಿದ್ಯಾಲಯವನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಎಂದು ಬದಲಾಯಿಸಿದರು. ರಾಜೀವ್ ಗಾಂಧಿ ಪಾಲಿಟೆಕ್ನಿಕ್ ಗೆ ಅಡಿಪಾಯ ಹಾಕಿದ್ದರು. ಇಂದಿರಾಗಾಂಧಿ ಪಾರ್ಕ್, ರಾಜೀವ್ ಗಾಂಧಿ ಕ್ರೀಡಾಂಗಣ, ನೆಹರೂ ಮ್ಯೂಸಿಯಂ, ಜವಾಹರ ಲಾಲ್ ನೆಹರೂ ಕಾಲೇಜು,ಹೀಗೆ ಪಟ್ಟಿಗೆ ಅಂತ್ಯವಿಲ್ಲ… ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News