ಸುದ್ರಢ ಕುಟುಂಬ, ಸುಭದ್ರ ಸಮಾಜ ಕಾಲದ ಬೇಡಿಕೆಯಾಗಿದೆ : ತಶ್ಕೀಲ ಖಾನಮ್

Update: 2021-02-24 16:41 GMT

ಕಾಪು :  ಜೀವನದಿಂದ ಸುದ್ರಢ ಕುಟುಂಬ , ಸುಭದ್ರ ಸಮಾಜ ನಿರ್ಮಾಣಕ್ಕೆ ಕುಟುಂಬ ಸಂಬಂಧಗಳನ್ನು ಬಲ ಪಡಿಸುವ ಮೂಲಕ ಇಂದಿನ ಕಾಲದ ಬೇಡಿಕೆಯಾಗಿದೆ ಎಂದು ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಶ್ಕೀಲ ಖಾನಮ್ ಮೊಹತರಮ ಹೇಳಿದರು.

ಅವರು ರಾಷ್ಟ್ರೀಯ ಅಭಿಯಾನದ ಅಂಗವಾಗಿ ಕಾಪುವಿನ ಕಮ್ಯುನಿಟಿ ಹಾಲ್‍ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಮಹಿಳಾ ವಿಭಾಗವು  ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳೊಂದಿಗೆ ಬದುಕುವ ಕುಟುಂಬಗಳು ಮಾಯವಾಗುತ್ತಿದೆ. ಎಲ್ಲಾ ಕಡೆ ಆಡಂಬರದ, ತೊರ್ಪಡಿಕೆಯ, ಸುಖ ಸಂತೋಷಗಳು ಪ್ರದರ್ಶಿಸಲ್ಪಡುತಿದ್ದು, ಒಳಗಿಂದೊಳಗೆ ಪರಸ್ಪರ ಅಪನಂಬಿಕೆ, ಸಂಶಯಗಳು ಬೆರೆತುಹೋಗಿ ಕುಟುಂಬಗಳು ಛಿದ್ರವಾಗಿ ಹೋಗುತ್ತಿರುವುದು ಕಂಡುಬರುತ್ತದೆ. ಇದರ ಪ್ರಭಾವವು ಸಮಾಜದ ಮೇಲೆ ಭೀರಿ, ಸಮಾಜವು ಅನೈತಿಕತೆ , ಅನಾಚಾರಗಳ ಬೀಡಾಗಿ ಅವನತಿಯತ್ತ ಸಾಗಲು ಮೂಲ ಕಾರಣವಾಗುತ್ತದೆ ಎಂದರು.

ಮಹಿಳಾ ವಿಭಾಗ ಉಡುಪಿ ಜಿಲ್ಲಾ ಸಂಚಾಲಕಿ ಕುಲ್ಸುಮ್ ಅಬೂಬಕ್ಕರ್ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ರಹಮತುನ್ನಿಸ ಧನ್ಯವಾದ ನೀಡಿದರು. ಸ್ಥಾನೀಯ ಸಂಚಾಲಕಿ ಶೇಹೆನಾಜ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಬೀಬಿ ಬತುಲ್ ರವರ ಕುರ್ ಆನ್ ಪಠಿಸಿದರು. ಆಯಿಷಾ ಶೈಮಾ ಸ್ತುತಿಃ ವಚನ ಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News