ಫೆ. 27 : ಕಾರ್ಕಳ ಭಗವಾನ್‌ ಶ್ರೀ ಬಾಹುಬಲಿ ರಥಯಾತ್ರಾ ಮಹೋತ್ಸವ

Update: 2021-02-24 17:35 GMT

ಕಾರ್ಕಳ : ಶ್ರೀ ಗೋಮಟೇಶ್ವರ ಬೆಟ್ಟದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ರಥಯಾತ್ರಾ ಮಹೋತ್ಸವವು ಫೆ. 27ರಂದು ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಜರಗಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಡಾ. ಪಿ.ಎಸ್.‌ ಯಡಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೈನ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌, ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್ ಉಪಸ್ಥಿತರಿರುವರು ಎಂದು ಅವಿಭಜಿತ ದ.ಕ. ಜೈನ ಯುವಜನ ಸಂಘದ ಅಧ್ಯಕ್ಷ ಪಾರ್ಶ್ವನಾಥ್ ಜೈನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ಫೆ. 25 ರಾತ್ರಿ ಗಂಟೆ 8ಕ್ಕೆ ನಾಂದಿಮಂಗಲ, ವಾಸ್ತು. ಫೆ. 26 ಸಂಜೆ ಗಂಟೆ 6:30ರಿಂದ ಕಲಿಕುಂಡ ಯಂತ್ರಾರಾಧನೆ, ಕಟ್ಟೆಪೂಜೆ. ಫೆ. 27ರಂದು ಮಧ್ಯಾಹ್ನ 108 ಕಲಶಗಳಿಂದ ಪಾದಾಭಿಷೇಕ ಮತ್ತು ಸಂಘ ಸಂತರ್ಪಣೆ, ರಾತ್ರಿ ಗಂಟೆ 7ರಿಂದ ಶ್ರೀ ಜೈನ ಮಠದಿಂದ ಅಗ್ರೋದಕ ಮೆರವಣಿಗೆ, ಜಿನವಾಣಿ ಮಹಿಳಾ ಒಕ್ಕೂಟದಿಂದ ಜಿನಭಕ್ತಿ ಗೀತೆಗಳು, 8:30ರಿಂದ ಧಾರ್ಮಿಕ ಸಭೆ, ಬಹುಮಾನ ವಿತರಣೆ, 9:30ರಿಂದ ರಥಯಾತ್ರಾ ಮಹೋತ್ಸವ ಮತ್ತು 108 ಕಲಶಗಳಿಂದ ಪಾದಾಭಿಷೇಕ. ಫೆ. 28ರಿಂದ ಅವಭೃತ ಕುಂಕುಮೋತ್ಸವ, ಧ್ವಜಾರೋಹಣ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಅವರನ್ನು ಸನ್ಮಾನಿಸಲಾಗುವುದು ಎಂದು ಪಾರ್ಶ್ವನಾಥ್ ಜೈನ್‌ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News