ರಾಜ ಕಾಲುವೆಯ ದುರವಸ್ಥೆಯನ್ನು ಸರಿಪಡಿಸಲು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

Update: 2021-02-24 18:19 GMT

ಮಂಗಳೂರು : ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿರುವ ಪಾಂಡೇಶ್ವರ ಬಳಿಯ  K.2  ಅಪಾರ್ಟ್ಮೆಂಟ್ ಹಿಂದೆ ಹರಿಯುವ ರಾಜಾ ಕಾಲುವೆ ಎಂಬ ಹೆಸರಿನ ತೋಡಿನಲ್ಲಿ ಒಳಚರಂಡಿಯ ತ್ಯಾಜ್ಯ ನೀರು ಸೇರಿ ಹೊರ ಚರಂಡಿಯಾಗಿ ಹರಿಯುವ ಕಾರಣ, ಇದರ ದುರ್ನಾತದಿಂದಾಗಿ ಪರಿಸರ ನಿವಾಸಿಗಳ ಬದುಕು ಅಸಹನೀಯವಾಗಿದ್ದು ಇದರ ಬಗ್ಗೆ ಮಹಾನಗರ ಪಾಲಿಕೆಯವರು ತಕ್ಷಣ ಗಮನಹರಿಸಿ ಕನಿಷ್ಠಪಕ್ಷ ಇಲ್ಲಿ ಬರುವ ಒಳಚರಂಡಿಯ ನೀರನ್ನು ತಡೆಗಟ್ಟುವ ನಿಟ್ಟಿನಲ್ಲಿಯಾದರೂ ಕಾರ್ಯಪ್ರವೃತ್ತರಾಗಬೇಕಾಗಿದೆಯೆಂದು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ  ದ.ಕ. ಜಿಲ್ಲಾ ಕಾರ್ಯದರ್ಶಿ ಎಮ್. ಎಸ್. ಮುತ್ತಲಿಬ್ ಪ್ರಕಟಣೆಯಲ್ಲಿ ತಿಳಿಸಿರುವರು.

ಇಲ್ಲಿರುವ ಇಷ್ಟೊಂದು ಸಮಸ್ಯೆಯು ಹಳೆಯದಾಗಿದ್ದು, ಇದನ್ನು ಇಲ್ಲಿನ ಜನಗಳು ಬಹಳ ಕಾಲದಿಂದ ಸಹಿಸುತ್ತಲೇ ಬಂದಿರುವರು, ಅದಕ್ಕಾಗಿ ಜನ ಪ್ರತಿನಿಧಿಗಳಲ್ಲಿ ಕೆಲವು ಬಾರಿ ಅಹವಾಲು ಮಂಡಿಸಿರುವೆವು, ಆದರೆ  ಇದುವರೆಗೆ ಇದರ ಸಮರ್ಪಕ ನಿರ್ವಾಹಣೆಯ ವಿಷಯದಲ್ಲಿ ಅವರಿಂದ ಯಾವುದೇ ರೀತಿಯ  ಪ್ರಾಮಾಣಿಕ ಪ್ರಯತ್ನವಾಗಿಲ್ಲ   ಕಾಲುವೆಯನ್ನು ಮುಚ್ಚುವ ಅಥವಾ ಕಿರಿದಾಗಿಸುವ ಕುರಿತಂತೆ ಕೇಳಿಕೊಂಡರೆ ಅದು ರಾಜಾ ಕಾಲುವೆಯಿದ್ದು ಹಾಗೆ ಮಾಡಲಾಗದೆನ್ನುವವರು ಹಾಗಿದ್ದರೆ ಇದರಲ್ಲಿ ಅಂತಹ ಪ್ರತ್ಯೇಕ ವಿಶೇಷತೆಯೇನಾದರೂ ಇದ್ದಲ್ಲಿ ಅದಕ್ಕೆ ಹೊಲಸು ನೀರನ್ನು ಬಿಡುವುದು ಎಷ್ಟು ಸರಿಯೆಂದವರು ಪ್ರಶ್ನಿಸಿದರು.

ಇದೀಗ ಇಲ್ಲಿ ಮಳೆಗಾಲದ ಸಮಯದಲ್ಲಿ ಮಾತ್ರವಲ್ಲದೆ ವರ್ಷದ ಎಲ್ಲಾ ದಿನಗಳಲ್ಲಿಯೂ ಕೊಳಚೆನೀರು ಹರಿಯುತ್ತಿದೆ. ಸದ್ಯ ಆದರ ಎರಡೂ ಬದಿಯಲ್ಲಿನ ಗೋಡೆಯ ದುರಸ್ತಿಯನ್ನು ಕೈಗೊಳ್ಳುವಲ್ಲಿ ಸನ್ಮಾನ್ಯ ಮೇಯರ್ ದಿವಾಕರ್ ಪಾಂಡೇಶ್ವರ ರವರು ಮುಂದಾಗಿರುವುದು ಸ್ವಾಗತಾರ್ಹವಾಗಿದೆ, ಆದರೆ, ಅದರಲ್ಲಿ ಸೇರುವ ಡ್ರೈ ನೇಜ್ ತಡೆಗಟ್ಟದೆ ಮಾಡುವ ಇತರ ಯಾವುದೇ ಕೆಲಸಗಳು ಪರಿಸರವಾಸಿಗಳಿಗೆ ನೆಮ್ಮದಿಯ ಉಸಿರು ಬಿಡುವ ಸಮಸ್ಯೆಯನ್ನು ಪರಿಹರಿಸಲಾಗದೆ ಹಾಗೆಯೇ ಉಳಿಯುವುದೆಂಬುವುದು ವಿಷಾದಕರವಾಗಿದೆಯೆಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News