ಚಟ್ಟೆಕಲ್ ಜಲಾಲಿಯ್ಯಾ ವಾರ್ಷಿಕ, ಬುರ್ದಾ ಮಜ್ಲಿಸ್ ಕಾರ್ಯಕ್ರಮ

Update: 2021-02-25 06:29 GMT

ಬಿ.ಸಿ.ರೋಡ್ : ಪೆ. 25, ಸಜೀಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ  ಮಾ.4,5,6  ನಡೆಯಲಿರುವ 9 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆಯ್ಯದ್ ಮುಸ್ತಾಖು ರಹ್ಮಾನ್ ತಂಙಳ್ ನೇತ್ರತ್ವದಲ್ಲಿ ಇತ್ತೀಚೆಗೆ ನಡೆಯಿತು.

ಇದೇ ವೇಳೆ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಲಾಗಿದ್ದು ಗೌರವಾಧ್ಯಕ್ಷರಾಗಿ ಸಯ್ಯಿದ್ ಮುಸ್ತಾಖುರಹ್ಮಾನ್ ತಂಙಳ್ ಚಟ್ಟೆಕಲ್, ಅಧ್ಯಕ್ಷರಾಗಿ  ಕರೀಂ ಬೊಳ್ಳಾಯಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಟಿ.ಕೆ. ಸಹದಿ ಕಯ್ಯೂರು, ಅಬ್ಬಾಸ್ ಹಾಜಿ ಕುಕ್ಕಾಜೆ, ಅಬ್ದುಲ್ ಅಝೀಝ್ ಕಾಪಿಕಾಡ್, ಕನ್ವೀನರ್‍ ಝೂಬೈರ್ ಕೊಳಕೆ, ಉಪ ಕನ್ವೀನರ್ ಹನೀಫ್ ಮುಸ್ಲಿಯಾರ್ ವಲವೂರು ಆವರನ್ನು ನೇಮಿಸಲಾಯಿತು.

ಪ್ರಚಾರ ಸಮಿತಿಯ ಸದಸ್ಯರುಗಳಾಗಿ ಸಫ್ವಾನ್ ಕಾಪಿಕ್ಕಾಡ್, ರಫೀಕ್ ಮದನಿ, ಹಂಝ ಪಾಳಿಲಿ ಬಾಳೆಪುಣಿ, ಇರ್ಷಾದ್, ನೌಪಾಲ್ ನಾಡಾಜೆ, ಸಿರಾಜ್ ಕೊಳಕೆ, ಅನ್ಸಾರ್, ಸಲಾಂ ಕಾರಾಜೆ,  ಜಬ್ಬಾರ್, ಸಿದ್ದೀಕ್ ಕುಕ್ಕಾಜೆ, ಮೌಸೂಪ್ ರಂಗೇಲು, ಮಜೀದ್ ಸಖಾಪಿ ಮೆಲ್ಕಾರ್, ರಝಾಕ್ ಸಖಾಪಫಿ ತೆಕ್ಕಾರ್ ಉಪ್ಪಿನಂಗಡಿ, ಟಿ.ಕೆ. ಸಹದಿ  ಮಂಚಿ ಕಯ್ಯೂರು, ಅಬ್ದುಲ್ ರಹಿಮಾನ್ ಸಖಾಪಿ ಮುಡಿಪು ರಪೀಕ್ ಕುಕ್ಕಿಲ ಬೊಳ್ಳಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

ಚಟ್ಟೆಕಲ್ ಜುಮ್ಮಾ ಮಸೀದಿಯಲ್ಲಿ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ 3 ದಿನಗಳ ಕಾಲ ನಡೆಯಲಿದ್ದು, ಮಾರ್ಚ್ 4 ರಂದು ಶಿವಮೊಗ್ಗ ತಂಙಳ್ ದು:ಹಾ ನೆರವೇರಿಸಲಿದ್ದು ಸ್ವಾದಿಖಲಿ ಫಾಳಿಲಿ ಗೂಡಗಲ್ಲೂರು ಬುರ್ದಾ ಮಜ್ಲಿಸ್ ನೇತೃತ್ವ ವಹಿಸುವರು.

ಮಾರ್ಚ್ 5 ರಂದು ಜಿಸ್ತಿಯಾ ಖುತಿಬಿಯ್ಯತ್ ನೇತೃತ್ವವನ್ನು  ನಾಸಿಫ್ ಕ್ಯಾಲಿಕಟ್ ವಹಿಸಲಿದ್ದು, ಮಾರ್ಚ್.6 ರಂದು ಜಲಾಲಿಯ್ಯ ರಾತೀಬ್ ನೇತೃತ್ವ  ಮುಹಮ್ಮದಲಿ ಮದನಿ ಕಲ್ಚರಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಕೋಯಿಕ್ಕೊಡ್  ವಹಿಸುವರು.  ಡಾ. ಫಾರೂಕ್ ನಈಮಿ ಕೊಲ್ಲಂ ಮುಖ್ಯ ಬಾಷಣಗೈಯುವರು.

ಧಾರ್ಮಿಕ ಮತಪಂಡಿತರು, ಸಾಮಾಜಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಲಾಲಿಯ್ಯ ಜುಮ್ಮಾ ಮಸೀದಿ ಚಟ್ಟೆಕಲ್ ಇದರ ಆಡಳಿತ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News