ಸಮುದ್ರಕ್ಕೆ ಧುಮುಕಿ ಮೀನುಗಾರರ ಜತೆ ಈಜಾಡಿದ ರಾಹುಲ್ ಗಾಂಧಿ

Update: 2021-02-25 08:07 GMT

ಹೊಸದಿಲ್ಲಿ: ಕೇರಳ ಭೇಟಿಯಲ್ಲಿರುವ  ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಬುಧವಾರ ಕೊಲ್ಲಂನಲ್ಲಿ ಸ್ಥಳೀಯ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರಕ್ಕೆ ಹಾರಿ ಸುಮಾರು 10 ನಿಮಿಷ ಈಜಾಡಿದ್ದಾರೆ.

ಹಲವಾರು ಮೀನುಗಾರರೊಂದಿಗೆ ಬೋಟಿನಲ್ಲಿದ್ದ ರಾಹುಲ್ ದಿಢೀರನೇ ಸಮುದ್ರಕ್ಕೆ ಹಾರಿ ಸುಮಾರು 10 ನಿಮಿಷ ಈಜಾಡಿ  ದಡಕ್ಕೆ ಮರಳಿದ್ದಾರೆ. ಬೋಟಿನಲ್ಲಿ ರಾಹುಲ್ ಜತೆಗೆ ಕೆ ಸಿ ವೇಣುಗೋಪಾಲನ್ ಹಾಗೂ ಟಿ ಎನ್ ಪ್ರತಾಪನ್ ಸಹಿತ ನಾಲ್ಕು ಕಾಂಗ್ರೆಸ್ ನಾಯಕರಿದ್ದರು. 

ರಾಹುಲ್ ಅವರು ಇತರ ಇಬ್ಬರು ಮೀನುಗಾರರೊಂದಿಗೆ ಈಜುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೆಲ ಮೀನುಗಾರರು ಮೀನಿಗೆ ಬಲೆ ಬೀಸಿ ನಂತರ ಸಮುದ್ರಕ್ಕೆ ಜಿಗಿಯುತ್ತಿರುವುದನ್ನು ಗಮನಿಸಿದ ರಾಹುಲ್ ಕೂಡ ನೀರಿಗೆ ಧುಮುಕಿದ್ದರು.

ಇದಕ್ಕೂ ಮುನ್ನ ಸುಮಾರು ಎರಡೂವರೆ ಗಂಟೆಗಳ ಕಾಲ ಬೋಟಿನಲ್ಲಿ ಮೀನುಗಾರರ ಜತೆ ಕಾಲ ಕಳೆದ ರಾಹುಲ್ ಅವರ ಸಮಸ್ಯೆಗಳನ್ನು ಆಲಿಸಿದರು. ಬೋಟಿನಲ್ಲಿಯೇ ತಯಾರಿಸಿದ ತಾಜಾ ಮೀನಿನ ಪದಾರ್ಥ ಹಾಗೂ ಬ್ರೆಡ್ ಅನ್ನು ಮೀನುಗಾರರು ರಾಹುಲ್ ಅವರಿಗೆ ನೀಡಿದರು.

ತಮ್ಮ ಕುಟುಂಬ ಹಾಗೂ ಆದಾಯ ಮೂಲಗಳ ಬಗ್ಗೆ ರಾಹುಲ್ ವಿಚಾರಿಸಿದರೆಂದು ಬೋಟ್ ಮಾಲಕ ಬಿಜು ಲಾರೆನ್ಸ್ ಹೇಳಿದ್ದಾರೆ. ಬುಧವಾರ ಕೂಡ ರಾಹುಲ್ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯಕ್ಕೆ ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News