ಎಲ್ ಪಿಜಿ ಸಿಲಿಂಡರ್ ದರ ಮತ್ತೆ 25 ರೂ. ಹೆಚ್ಚಳ

Update: 2021-02-25 08:13 GMT

ಹೊಸದಿಲ್ಲಿ: ಈ ತಿಂಗಳಲ್ಲಿ ಮೂರನೇ ಬಾರಿ ಅಡುಗೆ ಅನಿಲ ದರವು ಏರಿಕೆಯಾಗಿದ್ದು, ಕೇವಲ 3 ವಾರಗಳಲ್ಲಿ 100 ರೂ. ತನಕ ಏರಿಕೆಯಾಗಿದೆ. ಇಂದು ಅಡುಗೆ ಅನಿಲ ಸಿಲಿಂಡರ್ ದರವು 25 ರೂ. ಹೆಚ್ಚಳವಾಗಿದ್ದು, ಈ ಮೂಲಕ ದಿಲ್ಲಿಯಲ್ಲಿ 14.5  ಕೆಜಿ ಸಿಲಿಂಡರ್ ದರ 794 ರೂ.ಗೆ ಏರಿಕೆಯಾಗಿದೆ. 

ಇದೀಗ ಕೋಲ್ಕತದಲ್ಲಿ ಸಿಲಿಂಡರ್ ದರ 820 ರೂ. ಆಗಿದ್ದು, ಇದು 4 ಮೆಟ್ರೊ ನಗರದಲ್ಲಿ ಅತ್ಯಂತ ಗರಿಷ್ಠ ಏರಿಕೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News