ಫೆ.26ರಿಂದ ಕಟಪಾಡಿ ದರ್ಗಾ ಉರೂಸ್

Update: 2021-02-25 13:39 GMT

ಕಟಪಾಡಿ, ಫೆ.25: ಕಟಪಾಡಿ ಜುಮ್ಮಾ ಮಸೀದಿ ಸಮೀಪವಿರುವ ಇತಿಹಾಸ ಪ್ರಸಿದ್ಧ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹೀ (ಖ.ಸಿ) ರವರ ಉರೂಸ್ ಸಮಾರಂಭ ಫೆ.26ರ ಶುಕ್ರವಾರದಿಂದ ಫೆ.28ರವರೆಗೆ ನಡೆಯಲಿದೆ.

ಆ ಪ್ರಯುಕ್ತ ಫೆ.26ರ ಜುಮಾ ನಮಾಝಿನ ಬಳಿಕ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಮಸೀದಿ ಆಡಳಿತ ಅಧಿಕಾರಿ ಮಹಮ್ಮದ್ ಸಫ್ವಾನ್ ಉದ್ಘಾಟಿಸಲಿದ್ದು, ಖತೀಬರಾದ ಅಲ್ಹಾಜ್ ಕೆ.ಪಿ. ಮುಹಮ್ಮದ್ ಬಶೀರ್ ಮದನಿ ದುಆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಇಶಾ ನಮಾಝಿನ ಬಳಿಕ ಜಲಾಲಿಯ್ಯ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸರಕಾರಿಗುಡ್ಡೆ ಮದ್ರಸದ ಮುಅಲ್ಲಿಂ ಮೌಲಾನಾ ಅಬ್ದುಲ್ ಹಫೀಝ್ ರಝ್ವಿ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಜಫರ್ ಸ್ವಾದಿಕ್ ತಂಝಳ್ ಕುಂಬೋಳ್ ಆಶೀರ್ವಚನ ನೀಡಲಿದ್ದಾರೆ. ಕೆ.ಎಚ್ ಇಬ್ರಾಹಿಂ ಸಖಾಫಿ ಉಪಸ್ಥಿತಲಿರುವರು.

ಫೆ.27ರ ಮಗ್ರಿಬ್ ನಮಾಝಿನ ಬಳಿಕ ಬೃಹತ್ ಸಂದಲ್ ಮೆರವಣಿಗೆ ನಡೆಯಲಿದೆ. ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಕಟಪಾಡಿ ಖತೀಬರಾದ ಅಲ್‌ಹಾಜ್ ಮುಹಮ್ಮದ್ ಬಶೀರ್ ಮದನಿ, ಕರ್ನಾಟಕ ಮುಸ್ಲಿಂ ಜಮಾತ್ ಉಪಾಧ್ಯಕ್ಷ ರಾದ ಅಬೂಸುಫ್ಯಾನ್ ಇಬ್ರಾಹಿಂ ಮದನಿ, ಅಸ್ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಮತ ಪ್ರಭಾಷಣ ಮಾಡಲಿದ್ದಾರೆ.

ಕಟಪಾಡಿ ಮದ್ರಸ ಮುಅಲ್ಲಿಂ ಯೂಸೂಫ್ ಝಹ್ರಿ, ಸರಕಾರಿಗುಡ್ಡೆ ಖತೀಬರಾದ ಆಸಿಫ್ ಮುಈನಿ, ಗುರುಗಳಾದ ಅಶ್ರಫ್ ಸಅದಿ, ಅಗ್ರಹಾರ ಮದ್ರಸ ಗುರುಗಳಾದ ಅಬ್ದರ್ರಶೀದ್ ಮುಸ್ಲಿಯಾರ್, ಕಟಪಾಡಿ ಹಿದಾಯತುಲ್ ಇಸ್ಲಾಂ ಮದ್ರಸದ ಮೌಲಾನಾ ಶಕೀಲ್ ಅಹ್ಮದ್ ಹಲೀಮಿ, ಮುಅಲ್ಲಿಂ ಅಬ್ದುಲ್ ಹಫೀಝ್ ರಝ್ವಿ, ಸರಕಾರಿಗುಡ್ಡೆ ಮುಅಲ್ಲಿಂ ಅಬ್ದುರ್ರಹಮಾನ್ ಜೌಹರಿ, ಹುಸೈನರ್ ಕೋಟೆ, ಅಬ್ದುಲ್ ಹಕೀಂ ಸಖಾಫಿ ಉಪಸ್ಥಿತರಿರುವರು.

ಫೆ.28ರ ಬೆಳಗ್ಗೆ ಮೌಲೀದ್ ಪಾರಾಯಣ ನಡೆಯಲಿದ್ದು, ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News